
36 ವರ್ಷದ ವರ್ಜೀನಿಯಾ ಮೆಕ್‌ಕಲ್ಲೌಗ್, 70 ವರ್ಷ ವಯಸ್ಸಿನ ತನ್ನ ತಂದೆ ಜಾನ್ ಮೆಕ್‌ಕಲ್ಲಾಫ್‌ಗೆ ಪ್ರಿಸ್ಕ್ರಿಪ್ಷನ್ ಔಷಧಿಗಳೊಂದಿಗೆ ವಿಷವನ್ನು ನೀಡಿದ್ದಳಲ್ಲದೇ ಎರಡು ದಿನಗಳ ನಂತರ ತನ್ನ 71 ವರ್ಷದ ತಾಯಿ ಲೋಯಿಸ್ ಮೆಕ್‌ಕಲ್ಲೌಗೆ ಮಾರಣಾಂತಿಕವಾಗಿ ಇರಿದು ಹತ್ಯೆ ಮಾಡಿದ್ದಳು. ಇಬ್ಬರ ದೇಹವನ್ನು ಮನೆಯಲ್ಲೇ ಸಮಾಧಿ ಮಾಡಿದ್ದಳು.
ಬಳಿಕ ಹೆತ್ತವರ ಇರುವಿಕೆಯ ಕುರಿತು ಸಂಬಂಧಿಗಳು, ಸ್ನೇಹಿತರಿಗೆ ನಿರಂತರವಾಗಿ ಸುಳ್ಳು ಹೇಳುತ್ತಾ ಬಂದಿದ್ದ ಆಕೆ, ಅವರಿಬ್ಬರ ಕ್ರೆಡಿಟ್ ಕಾರ್ಡ್ ಮೇಲೆ ಬೃಹತ್ ಮೊತ್ತದ ಸಾಲ ಪಡೆದಿದ್ದಳು. ಜೊತೆಗೆ ಅವರ ಪಿಂಚಣಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದಳು.
2019 ರ ಜೂನ್ 17 ಮತ್ತು 20 ರ ನಡುವೆ ತಾನು ಮಾಡಿದ ಕೊಲೆಗಳನ್ನು ವಿಚಾರಣೆ ವೇಳೆ ಒಪ್ಪಿಕೊಂಡ ನಂತರ, ನ್ಯಾಯಾಧೀಶರಾದ ಜಸ್ಟಿಸ್ ಜಾನ್ಸನ್, ಮ್ಯಾಕ್‌ಕುಲೋಗೆ ಕನಿಷ್ಠ 36 ವರ್ಷಗಳ ಅವಧಿಯೊಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಮೆಕ್‌ಕುಲೋ ವಿಷವನ್ನು ನೀಡಿದ್ದಳು, ಅವಳು ಔಷಧಿಯನ್ನು ಪುಡಿಮಾಡಿ ಅವನ ಮದ್ಯದೊಳಗೆ ಸೇರಿಸಿ ಹತ್ಯೆ ಮಾಡಿದ್ದು, ಒಂದು ದಿನದ ನಂತರ, ತನ್ನ ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಮಾರಣಾಂತಿಕವಾಗಿ ಇರಿದಿದ್ದಳು.
ಬಳಿಕ ಪಂಪ್ ಹಿಲ್‌ನಲ್ಲಿರುವ ಕುಟುಂಬದ ಮನೆಯಲ್ಲಿ ತಾತ್ಕಾಲಿಕ ಸಮಾಧಿಯಲ್ಲಿ ಅವರ ದೇಹಗಳನ್ನು ಬಚ್ಚಿಟ್ಟಿದ್ದು, ಅವರ ಇರುವಿಕೆಯನ್ನು ಮರೆಮಾಚಲು ನಿರಂತರವಾಗಿ ಸುಳ್ಳುಗಳನ್ನು ಹೇಳಿದ್ದಳು. ವೈದ್ಯರು ಮತ್ತು ಸಂಬಂಧಿಕರಿಗೆ ತನ್ನ ಪೋಷಕರು ಅಸ್ವಸ್ಥರಾಗಿದ್ದಾರೆ, ರಜಾದಿನಗಳಲ್ಲಿ ಅಥವಾ ಸುದೀರ್ಘ ಪ್ರವಾಸಗಳಲ್ಲಿ ದೂರ ಹೋಗಿದ್ದಾರೆ ಎಂದು ಹೇಳಿದ್ದಳು.
ಆದರೆ Mr ಮತ್ತು Mrs McCullough ಅವರ ಯೋಗಕ್ಷೇಮದ ಕಾಳಜಿಯನ್ನು ವಹಿಸಿಕೊಂಡಿದ್ದ ಸ್ಸೆಕ್ಸ್ ಕೌಂಟಿ ಕೌನ್ಸಿಲ್ ನ ಸುರಕ್ಷತಾ ತಂಡ ಸೆಪ್ಟೆಂಬರ್ 2023 ರಲ್ಲಿ ಅವರು ಬಹುಕಾಲದಿಂದ ಕಾಣದಿರುವ ಕುರಿತು ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ಉಲ್ಲೇಖಿಸಿದ್ದರು. ಅಲ್ಲದೇ ಮೆಕ್ಯುಲೋ ಔಷಧಿಗಳನ್ನು ಸಂಗ್ರಹಿಸಲು ಮತ್ತು ನಿಗದಿತ ಆರೋಗ್ಯ ಸಂದರ್ಶನಕ್ಕೆ ಹಾಜರಾಗಲು ವಿಫಲರಾಗಿದ್ದಾರೆ ಎಂದು ತಿಳಿಸಿತ್ತು.

ಇದರ ಬಳಿಕ ಕಾಣೆಯಾದ ವ್ಯಕ್ತಿಗಳ ತನಿಖೆಯನ್ನು ಆರಂಭಿಸಿದ್ದು, ಈ ವೇಳೆ ಅಧಿಕಾರಿಗಳಿಗೆ ಮಹಿಳೆ ಸುಳ್ಳು ಹೇಳಿದ್ದಲ್ಲದೇ ಪ್ರವಾಸ ಕೈಗೊಂಡಿರುವ ಅವರು ಅಕ್ಟೋಬರ್‌ನಲ್ಲಿ ಹಿಂತಿರುಗುತ್ತಾರೆ ಎಂದು ತಿಳಿಸಿದ್ದಳು. ಆದರೆ ಈಕೆಯ ವರ್ತನೆಯಿಂದ ಅನುಮಾನಗೊಂಡು ಸೆಪ್ಟೆಂಬರ್ 15, 2023 ರಂದು ಪಂಪ್ ಹಿಲ್‌ನಲ್ಲಿರುವ ಮನೆಗೆ ಅಧಿಕಾರಿಗಳು ಬಲವಂತವಾಗಿ ಮನೆ ಪ್ರವೇಶಿಸಿದಾಗ, ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.

