alex Certify ಗೋಡೆಗೆ ತಲೆಗುದ್ದಿಸಿ ಅತ್ತೆಯನ್ನೇ ಕೊಂದ ಸೊಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಡೆಗೆ ತಲೆಗುದ್ದಿಸಿ ಅತ್ತೆಯನ್ನೇ ಕೊಂದ ಸೊಸೆ

ಬೆಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬಳು ಅತ್ತೆಯನ್ನೇ ಗೋಡೆಗೆ ತಲೆಗುದ್ದಿಸಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀರಾಮಪುರದ 7ನೇ ಮುಖ್ಯರಸ್ತೆ ನಿವಾಸಿ ರಾಣಿಯಮ್ಮ(76) ಕೊಲೆಯಾದ ವೃದ್ಧೆ. ಆರೋಪಿ ಸೊಸೆ ಸುಗುಣಾ(46) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ರಾಣಿಯಮ್ಮ ಅವರಿಗೆ ಒಬ್ಬ ಪುತ್ರ, ಮೂವರು ಪುತ್ರಿಯರಿದ್ದು, ಎಲ್ಲರಿಗೂ ಮದುವೆಯಾಗಿದೆ.

ಶ್ರೀರಾಮಪುರದಲ್ಲಿ ಎರಡು ಅಂತಸ್ತಿನ ಮನೆ ಇದ್ದು, ಕೆಲವು ವರ್ಷಗಳ ಹಿಂದೆ ಮನೆಯನ್ನು ಮಗನ ಹೆಸರಿಗೆ ವರ್ಗಾಯಿಸಿದ್ದಾರೆ. ಮೊದಲ ಮಹಡಿಯಲ್ಲಿ ಮಗ, ಸೊಸೆ ವಾಸವಾಗಿದ್ದು, ನೆಲಮಡಿಯಲ್ಲಿ ರಾಣಿಯಮ್ಮ ವಾಸವಾಗಿದ್ದರು.

ಆ ಮನೆಯನ್ನು ಮಗ ತನ್ನ ಪತ್ನಿಸುಗುಣ ಹೆಸರಿಗೆ ಬರೆದಿದ್ದು, ಸುಗುಣ ಅತ್ತೆಯೊಂದಿಗೆ ಜಗಳವಾಡಿ ಮನೆ ಖಾಲಿ ಮಾಡುವಂತೆ ಬಲವಂತ ಮಾಡಿದ್ದಳು. ಇದೇ ವಿಚಾರಕ್ಕೆ ಅತ್ತೆ, ಸೊಸೆ ನಡುವೆ ಜಗಳವಾಗಿದ್ದು, ರಾಣಿಯಮ್ಮನ ಮುಖಕ್ಕೆ ಗುದ್ದಿ ಗೋಡೆಗೆ ತಲೆ ಗುದ್ದಿಸಿದ ಸುಗುಣ ಕೊಲೆ ಮಾಡಿದ್ದಾಳೆ.

ಹಲ್ಲೆಗೊಳಗಾಗಿ ಪ್ರಜ್ಞೆ ತಪ್ಪಿದ್ದ ರಾಣಿಯಮ್ಮನನ್ನು ಆಕೆಯ ಪುತ್ರಿ ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿ ಸುಗುಣಾನ್ನು ಪೊಲೀಸರು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...