alex Certify ಅತ್ತೆ-ಮಾವನ ಮೇಲಿನ ಕೋಪಕ್ಕೆ 40ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ ಸೊಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ತೆ-ಮಾವನ ಮೇಲಿನ ಕೋಪಕ್ಕೆ 40ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ ಸೊಸೆ

ದಾವಣಗೆರೆ: ಆಸ್ತಿ ಕಲಹ, ಕೌಟುಂಬಿಕ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸಮೃದ್ಧವಗಿ ಬೆಳೆದು ನಿಂತಿದ್ದ ಅಡೆಕೆ ಮರಗಳ ಮಾರಣಹೋಮ ನಡೆದಿರುವ ಘಟನೆ ದಾವಣಗೆರೆ ಜಿಲ್ಲೆಯ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ.

ಇಲ್ಲೋರ್ವ ಮಹಿಳೆ ತನ್ನ ಅತ್ತೆ-ಮಾವನ ಮೇಲಿನ ಕೋಪಕ್ಕೆ ತೋಟದಲ್ಲಿಡ್ಡ ಅಡಿಕೆ ಮರಗಳನ್ನು ಕಡಿದು ಹಾಕಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಚಿದಾನಂದಸ್ವಾಮಿ ಹಾಗೂ ಶಿವನಾಗಮ್ಮ ಎಂಬುವವರ ಹಿರಿಯ ಮಗ ಕುಮಾರಸ್ವಾಮಿ ಎಂಬುವವರ ಪತ್ನಿ ರೂಪಾ, ಕೆಲ ವರ್ಷಗಳಿಂದ ಆಸ್ತಿಯಲ್ಲಿ ಪಾಲು ಕೇಳಿದ್ದರಂತೆ. ಆದರೆ ಪಾಲು ಕೊಡಕು ಅತ್ತೆ-ಮಾವ ಹಿಂದೇಟು ಹಾಕಿದ್ದಾರೆ. ಸೊಸೆ ರೂಪಾ ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಹಲ್ಲೆ ನಡೆಸುತ್ತಿದ್ದಳು. 8 ಲಕ್ಷ ರೂಪಾಯಿ ಪಡೆದು ಮನೆ ಕಟ್ಟಿಸಿಕೊಂಡಿದ್ದಾಳೆ ಎಂದು ಮಾವ ಚಿದಾನಂದಸ್ವಾಮಿ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಆರೋಪಿ ರೂಪಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...