ಚಿಕ್ಕಮಗಳೂರು : ದತ್ತಪೀಠ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು, ವಿವಾದಿತ ಸ್ಥಳದಲ್ಲಿರುವ ಗೋರಿಗಳ ಸ್ಥಳಾಂತರಕ್ಕೆ ಶ್ರೀರಾಮಸೇನೆ ಪಟ್ಟು ಹಿಡಿದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಪೀಠ ವಿವಾದ ಮತ್ತೆ ಚರ್ಚೆಗೆ ಬಂದಿದ್ದು, ವಿವಾದಿತ ಸ್ಥಳದಲ್ಲಿರುವ ಗೋರಿಗಳ ಸ್ಥಳಾಂತರಕ್ಕೆ ಶ್ರೀರಾಮಸೇನೆ ಪಟ್ಟು ಹಿಡಿದಿದೆ. ಗೋರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ದತ್ತಮಾಲಾ ಅಭಿಯಾನಕ್ಕೆ ಹಿಂದೂ ಸಂಘಟನೆ ನಿರ್ಧರಿಸಿದೆ. ಅಕ್ಟೋಬರ್ 30ರಿಂದ ನವೆಂಬರ್ 3ರವರೆಗೆ ಅಭಿಯಾನ ನಡೆಸಲಿದೆ. ಅದೇ ರೀತಿ ಅರ್ಚಕರ ನೇಮಕ, ದತ್ತಪೀಠ ವ್ಯವಸ್ಥಾಪನಾ ಸಮಿತಿ ರದ್ದು ಮಾಡದಂತೆ ಆಗ್ರಹಿಸಿ ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ಗೆ ಶ್ರೀರಾಮಸೇನೆ ಸಂಘಟನೆ ಮನವಿ ಸಲ್ಲಿಸಿದೆ.
ದತ್ತಪೀಠಕ್ಕೆ ಬಿಜೆಪಿ ಸರ್ಕಾರದ ನೇಮಿಸಿದ್ದ ದತ್ತಪೀಠ ಆಡಳಿತ ವ್ಯವಸ್ಥಾಪನ ಸಮಿತಿಯನ್ನ ವಜಾ ಮಾಡಬೇಕೆಂದು ಸಯೈದ್ ಹುಸೇನ್ ಶಾ ಖಾದ್ರಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಹಲವು ವಿರೋಧದ ಮಧ್ಯೆಯೂ ದತ್ತಪೀಠಕ್ಕೆ ವ್ಯವಸ್ಥಾಪನ ಸಮಿತಿಯನ್ನ ರಚನೆ ಮಾಡಿತ್ತು.ಇದೀಗ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ವ್ಯವಸ್ಥಾಪನ ಸಮಿತಿಯನ್ನು ವಜಾಗೊಳಿಸಬೇಕೆಂದು ಸೈಯದ್ ಬುಡೇನ್ ಶಾ ಖಾದ್ರಿ ಮನವಿ ಸಲ್ಲಿಸಿದ್ದಾರೆ.