alex Certify ಚರ್ಮದ ಕೋಮಲತೆಗೆ ಬೇಕು ʼಖರ್ಜೂರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ ಕೋಮಲತೆಗೆ ಬೇಕು ʼಖರ್ಜೂರʼ

ಹಲವಾರು ಪೋಷಕಾಂಶಗಳು ಮತ್ತು ಖನಿಜಗಳ ಆಗರವಾಗಿರುವ ಖರ್ಜೂರ ಉತ್ತಮ ಸೌಂದರ್ಯವರ್ಧಕವೂ ಹೌದು. ಖರ್ಜೂರವನ್ನು ಸೇವಿಸುತ್ತಾ ಬರುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ಪಡೆಯಬಹುದು. ಅಷ್ಟೇ ಅಲ್ಲದೇ, ಇನ್ನೂ ಹಲವು ಪ್ರಯೋಜನಗಳ ವಿವರ ತಿಳಿಯೋಣ.

* ಖರ್ಜೂರದಿಂದ ಹಿಂಡಿ ತೆಗೆದ ತೈಲ ಕೂದಲ ಬುಡವನ್ನು ದೃಢಗೊಳಿಸುತ್ತದೆ. ಹಲವಾರು ಪೋಷಕಾಂಶಗಳನ್ನು ಹೊಂದಿರುವ ಈ ತೈಲ ತಲೆ ಬುಡದ ಚರ್ಮ ಒಣಗುವುದನ್ನು ಕಡಿಮೆಗೊಳಿಸಿ ಕೂದಲು ಆರೋಗ್ಯಕರವಾಗಿ, ಉದ್ದವಾಗಿ ಬೆಳೆಯಲು ನೆರವಾಗುತ್ತದೆ.

* ಖರ್ಜೂರದಲ್ಲಿರುವ ವಿಟಮಿನ್ ಸಿ ಚರ್ಮದ ಸೆಳೆತವನ್ನು ಹೆಚ್ಚಿಸಿ ಕಾಂತಿಯುಕ್ತವಾಗಿಸುತ್ತವೆ. ಅಲ್ಲದೇ ಚರ್ಮಕ್ಕೆ ಒಳಗಿನಿಂದ ಆರ್ದ್ರತೆಯನ್ನು ಒದಗಿಸುವ ಮೂಲಕ ಕೋಮಲತೆ ನೀಡುತ್ತದೆ ಹಾಗೂ ನೆರಿಗೆಮುಕ್ತವಾಗಿಸುತ್ತದೆ.

* ನೆರಿಗೆ ಮತ್ತು ಸೂಕ್ಷ್ಮವಾದ ಗೆರೆಗಳು ವೃದ್ಧಾಪ್ಯದ ಸಂಕೇತವಾಗಿದ್ದು, ಇವು ಬರುವುದನ್ನು ತಡವಾಗಿಸುವ ಮೂಲಕ ತಾರುಣ್ಯವನ್ನು ಬಹುಕಾಲದವರೆಗೆ ಕಾಪಾಡಿಕೊಳ್ಳಲು ಖರ್ಜೂರ ನೆರವಾಗುತ್ತದೆ.

* ಪ್ರತಿದಿನ ಸುಮಾರು ಎರಡರಿಂದ ಮೂರು ಖರ್ಜೂರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೂದಲು ಉದುರುವ ಸಂಖ್ಯೆ ಕೂಡ ಕಡಿಮೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಬಿ ಕೂದಲಿಗೆ ಉತ್ತಮ ಪೋಷಣೆ ನೀಡುತ್ತದೆ.

* ಖರ್ಜೂರದಲ್ಲಿರುವ ವಿಟಮಿನ್ ಬಿ ಚರ್ಮದ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ. ವಿಶೇಷವಾಗಿ ಸ್ಟ್ರೆಚ್ ಮಾರ್ಕ್ಸ್ ಬೀಳುವುದನ್ನು ಕಡಿಮೆಗೊಳಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...