
ಈಗಿನ ಜಮಾನದಲ್ಲಂತೂ ಯಾವ ವಯಸ್ಸಿನಲ್ಲಿ ಯಾರಿಗೆ ಯಾವ ಕಾಯಿಲೆ ಬಂದು ವಕ್ಕರಿಸುತ್ತದೆ ಎಂದು ಹೇಳಲು ಅಸಾಧ್ಯ. ಹೀಗಾಗಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ತೋರಿದರೂ ಸಹ ಅದು ಕಡಿಮೆಯೇ. ಮನುಷ್ಯರು ಅದರಲ್ಲೂ ವಿಶೇಷವಾಗಿ ಪುರುಷರು ಖರ್ಜೂರ ಸೇವನೆ ಮಾಡುವುದರ ಮೂಲಕ ಆರೋಗ್ಯವನ್ನು ಹೆಚ್ಚು ಕಾಪಾಡಿಕೊಳ್ಳಬಹುದು.
ಪುರುಷರ ಬಂಜೆತನದ ವಿರುದ್ಧ ಹೋರಾಡುತ್ತದೆ :
ಬಂಜೆತನದಿಂದ ಬಳಲುತ್ತಿರುವ ಪುರುಷರು ಖರ್ಜೂರ ಸೇವನೆ ಮಾಡಿದರೆ ಒಳ್ಳೆಯದು. ಈ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆಗಳನ್ನು ನಡೆಸಲಾಗಿದೆ. ಬಂಜೆತನದ ಸಮಸ್ಯೆಯಿಂದ ಬಳಲುತ್ತಿರುವ ಪುರುಷರಿಗೆ ವೈದ್ಯರೇ ಖರ್ಜೂರ ಸೇವನೆಯ ಸಲಹೆ ನೀಡುವುದುಂಟು.
ಮೆದುಳಿನ ಆರೋಗ್ಯ ವೃದ್ಧಿ :
2016 ರಲ್ಲಿ ನಡೆಸಲಾದ ಅಧ್ಯಯನದಲ್ಲಿ ಖರ್ಜೂರವು ಮೆದುಳು ಸಂಬಂಧಿ ಕಾಯಿಲೆಯಾದ ಆಲ್ಝೈಮರ್ಸ್ ರಿಸ್ಕ್ನ್ನು ಭಾಗಶಃ ಕಡಿಮೆ ಮಾಡುತ್ತವೆ ಎಂದು ತಿಳಿದುಬಂದಿದೆ. ಈ ಕಾಯಿಲೆ ಬಂದವರು ತಮ್ಮ ಜ್ಞಾಪಕ ಶಕ್ತಿಯನ್ನು ಹಾಗೂ ಯೋಚನಾ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಆದರೆ ಖರ್ಜೂರವು ಮೆದುಳಿನಲ್ಲಿ ಈ ಕಾಯಿಲೆ ಬಾರದಂತೆ ತಡೆಯುತ್ತವೆ.
ಚರ್ಮದ ಆರೋಗ್ಯ ವೃದ್ಧಿ :
ಖರ್ಜೂರದಿಂದ ತಯಾರಾದ ಬಾಡಿ ಲೋಶನ್ಗಳಂತ ಕ್ರೀಮ್ಗಳು ನಿಮ್ಮ ಚರ್ಮದ ಆರೋಗ್ಯವನ್ನು ವೃದ್ಧಿಸುತ್ತವೆ. ಸುಕ್ಕುಗಟ್ಟುವಿಕೆ, ಸೂರ್ಯನ ಶಾಖಕ್ಕೆ ಚರ್ಮ ಸುಡುವುದು ಇಂತಹ ಸಮಸ್ಯೆಗಳಿಗೆ ಖರ್ಜೂರ ಪರಿಹಾರವಾಗಿದೆ.