alex Certify ಜನಸಾಮಾನ್ಯರ ಹಣದುಬ್ಬರ ಸಂಕಷ್ಟ ; ಶಾಸಕರು, ಸಂಸದರ ಸಂಬಳ ಏರಿಕೆ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರ ಹಣದುಬ್ಬರ ಸಂಕಷ್ಟ ; ಶಾಸಕರು, ಸಂಸದರ ಸಂಬಳ ಏರಿಕೆ !

ಜನಸಾಮಾನ್ಯರು ಹಣದುಬ್ಬರದ ಬಿಸಿಯಲ್ಲಿ ಬೆಂದು ಹೋಗುತ್ತಿದ್ದರೆ, ಶಾಸಕರು ಮತ್ತು ಸಂಸದರ ಸಂಬಳ ಮಾತ್ರ ಗಗನಕ್ಕೇರುತ್ತಿದೆ.

ಕೇಂದ್ರ ಸರ್ಕಾರವು ಸಂಸದರ ಮಾಸಿಕ ವೇತನವನ್ನು 24%ರಷ್ಟು ಹೆಚ್ಚಿಸಿದೆ. 2023ರ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗುವಂತೆ ಈ ಹೆಚ್ಚಳ ಜಾರಿಗೆ ಬರಲಿದೆ. ಇದರೊಂದಿಗೆ ಸಂಸದರ ಮಾಸಿಕ ವೇತನ 1.24 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ.

2018ರಲ್ಲಿ ಸಂಸದರ ವೇತನವನ್ನು 50 ಸಾವಿರ ರೂಪಾಯಿಗಳಿಂದ 1 ಲಕ್ಷ ರೂಪಾಯಿಗಳಿಗೆ ದ್ವಿಗುಣಗೊಳಿಸಲಾಗಿತ್ತು. ಇನ್ನು ಕರ್ನಾಟಕ ಸರ್ಕಾರ ಕೂಡ ಶಾಸಕರ ವೇತನವನ್ನು ದುಪ್ಪಟ್ಟು ಮಾಡುವ ಎರಡು ಮಸೂದೆಗಳನ್ನು ಅಂಗೀಕರಿಸಿದೆ.

ತುಟ್ಟಿಭತ್ಯೆ ಸೂಚ್ಯಂಕದ ಆಧಾರದ ಮೇಲೆ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸದರ ವೇತನವನ್ನು ಸರಿಹೊಂದಿಸುವ ನಿರ್ಧಾರವನ್ನು 2018ರಲ್ಲಿ ಮೊದಲ ಬಾರಿಗೆ ತೆಗೆದುಕೊಳ್ಳಲಾಗಿತ್ತು. ವೇತನದಲ್ಲಿನ ಈ ತಾರತಮ್ಯ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...