ಈ ಬಾರಿಯ ದಸರಾ ರಜವನ್ನು ಹಬ್ಬದ ನಂತರ ನೀಡಲಾಗುತ್ತಿದೆ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ಕಾರಣ ಆಯಾ ಜಿಲ್ಲೆಗಳಿಗೆ ಅನುಗುಣವಾಗಿ ದಸರಾ ರಜೆಯನ್ನು ನಿಗದಿಪಡಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿತ್ತು.
ಅದರಂತೆ ದಸರಾ ಹಬ್ಬದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು ಈಗ ಮೈಸೂರು ಜಿಲ್ಲೆಯ ಶಾಲೆಗಳಿಗೂ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 9ರ ವರೆಗೆ ದಸರಾ ರಜೆ ಘೋಷಿಸಲಾಗಿದೆ.
ಆದರೆ ಅಕ್ಟೋಬರ್ 2ರ ಗಾಂಧಿ ಜಯಂತಿ ಹಾಗೂ ಅಕ್ಟೋಬರ್ 9 ರಂದು ನಡೆಯುವ ವಾಲ್ಮೀಕಿ ಜಯಂತಿಯನ್ನು ಕಡ್ಡಾಯವಾಗಿ ಶಾಲೆಗಳಲ್ಲಿ ಆಚರಿಸಬೇಕೆಂಬ ಷರತ್ತಿನ ಮೇರೆಗೆ ಈ ರಜೆಯನ್ನು ನೀಡಲಾಗಿದೆ.