ಬೆಂಗಳೂರು: ದಸರಾ ರಜೆ, ಹಬ್ಬಕ್ಕಾಗಿ ಊರಿಗೆ ಹೊರಟವರಿಗೆ ಸಿಹಿ ಸುದ್ದಿ ಇಲ್ಲಿದೆ. ಕೆಎಸ್ಆರ್ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಮೈಸೂರು ದಸರಾ ಮಹೋತ್ಸವ ವೀಕ್ಷಿಸಲು ಬರುವವರು, ದಸರಾ ರಜಾ ದಿನಗಳಲ್ಲಿ ವಿವಿಧ ನಗರಗಳಿಗೆ ಸಂಚರಿಸುವವರ ಅನುಕೂಲಕ್ಕಾಗಿ ಅಕ್ಟೋಬರ್ 9ರಿಂದ 12ರವರೆಗೆ ಕೆಎಸ್ಆರ್ಟಿಸಿ ಎರಡು ಸಾವಿರಕ್ಕೂ ಹೆಚ್ಚಿನ ಬಸ್ ಸೇವೆಗಳನ್ನು ನೀಡಲಾಗುವುದು.
ರಾಜ್ಯ ಮತ್ತು ಹೊರ ರಾಜ್ಯದ ವಿವಿಧ ನಗರಗಳಿಗೆ ವಿಶೇಷ ಬಸ್ ಸೇವೆ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಹೊರಡುವ ವಿಶೇಷ ಬಸ್ ಗಳು ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಾಗುವುದು.
ವಿಶೇಷ ಬಸ್ ಗಳಲ್ಲಿ ಮೈಸೂರು ದಸರಾ ಅಂಗವಾಗಿ ಕೆಎಸ್ಆರ್ಟಿಸಿ 660 ಹೆಚ್ಚುವರಿ ಬಸ್ ಗಳು ಸಂಚರಿಸುತ್ತವೆ. ಅವುಗಳಲ್ಲಿ 260 ಬಸ್ ಗಳು ಬೆಂಗಳೂರಿನಿಂದ ಮೈಸೂರು ನಗರಕ್ಕೆ ಸಂಚರಿಸಲಿದೆ. ಈ ಎಲ್ಲಾ ಸೇವೆಗಳ ಕುರಿತಾದ ಮಾಹಿತಿ ಮತ್ತು ಮುಂಗಡ ಟಿಕೆಟ್ ಬುಕಿಂಗ್ ಆಗಿ ಕೆಎಸ್ಆರ್ಟಿಸಿಯ www.ksrtc.Karnataka.gov.in ವೆಬ್ಸೈಟ್ ಗೆ ಭೇಟಿ ನೀಡಬಹುದಾಗಿದೆ.