ದೇಶದ ಅತಿದೊಡ್ಡ ಇಸ್ಲಾಮಿಕ್ ಸೆಮಿನರಿಗಳಲ್ಲಿ ಒಂದಾದ ದಾರುಲ್ ಉಲೂಮ್ ದಿಯೋಬಂದ್ ಘಜ್ವಾ-ಎ-ಹಿಂದ್ ಕಲ್ಪನೆಗೆ ಮಾನ್ಯತೆ ನೀಡುವ ಫತ್ವಾ ಹೊರಡಿಸಿದೆ ಎಂದು ವರದಿಯಾಗಿದೆ.
‘ಘಜ್ವಾ-ಎ-ಹಿಂದ್’ “ಇಸ್ಲಾಮಿಕ್ ದೃಷ್ಟಿಕೋನದಿಂದ ಮಾನ್ಯವಾಗಿದೆ” ಎಂದು ಸೆಮಿನರಿ ತನ್ನ ವೆಬ್ಸೈಟ್ನಲ್ಲಿ ಬರೆದಿದೆ. ಘಜ್ವಾ-ಎ-ಹಿಂದ್ನಲ್ಲಿ ಹುತಾತ್ಮರಾದವರು ಮಹಾನ್ ಸರ್ವೋಚ್ಚ ಹುತಾತ್ಮರಾಗುತ್ತಾರೆ ಎಂದು ಅದು ಹೇಳಿದೆ.ಫತ್ವಾವನ್ನು ‘ರಾಷ್ಟ್ರ ವಿರೋಧಿ’ ಎಂದು ಕರೆದಿರುವ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಸಹರಾನ್ಪುರ ಡಿಎಂ ಮತ್ತು ಎಸ್ಎಸ್ಪಿಗೆ ಎಫ್ಐಆರ್ ದಾಖಲಿಸುವಂತೆ ಕೇಳಿದೆ.
ಮೂಲಗಳ ಪ್ರಕಾರ, ನೆಟ್ಟಿಗರೊಬ್ಬರು ಘಜ್ವಾ-ಎ-ಹಿಂದ್ ಬಗ್ಗೆ ದಾರುಲ್ ಉಲೂಮ್ನಿಂದ ಆನ್ಲೈನ್ನಲ್ಲಿ ಮಾಹಿತಿ ಕೋರಿದ್ದರು. ಹದೀಸ್ ನಲ್ಲಿ ಇದರ ಬಗ್ಗೆ ಏನಾದರೂ ಉಲ್ಲೇಖವಿದೆಯೇ ಎಂದು ಈ ವ್ಯಕ್ತಿ ಸೆಮಿನರಿಯನ್ನು ಕೇಳಿದ್ದರು.ಇದಕ್ಕೆ ಪ್ರತಿಕ್ರಿಯೆಯಾಗಿ, ದಾರುಲ್ ಉಲೂಮ್ ದಿಯೋಬಂದ್ ‘ಕುತುಬ್ ಅಲ್-ಸಿಟ್ಟಾ’ (ಆರು ಪ್ರಮುಖ ಹದೀಸ್ ಸಂಗ್ರಹಗಳು) ಗಳಲ್ಲಿ ಒಂದಾದ ‘ಸುನಾನ್ ಅನ್-ನಸೈ’ ಅನ್ನು ಉಲ್ಲೇಖಿಸಿದೆ. ಘಜ್ವಾ-ಎ-ಹಿಂದ್ ಬಗ್ಗೆ ಅದರಲ್ಲಿ ಸಂಪೂರ್ಣ ಅಧ್ಯಾಯವಿದೆ ಎಂದು ಅದು ಹೇಳಿದೆ.
ಪ್ರವಾದಿ ಮುಹಮ್ಮದ್ ಅವರ ಆಪ್ತರಾಗಿದ್ದ ಹಜರತ್ ಅಬು ಹುರೈರಾ ಅವರನ್ನು ಉಲ್ಲೇಖಿಸಿ ಹದೀಸ್ ನಿರೂಪಿಸಲಾಗಿದೆ ಎಂದು ಫತ್ವಾದಲ್ಲಿ ಉಲ್ಲೇಖಿಸಲಾಗಿದೆ. ಎನ್ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕನುಂಗೊ ಅವರ ದೂರನ್ನು ಪರಿಗಣಿಸಿದ ಸಹರಾನ್ಪುರ ಜಿಲ್ಲಾ ಅಧಿಕಾರಿ ದಿನೇಶ್ ಚಂದ್ರ ಅವರು ತನಿಖೆಯ ನಂತರ ಕ್ರಮ ಕೈಗೊಳ್ಳುವಂತೆ ಎಸ್ಡಿಎಂ ಮತ್ತು ಸಿಒ ದಿಯೋಬಂದ್ ಗೆ ನಿರ್ದೇಶನ ನೀಡಿದ್ದಾರೆ.