ಅಯೋಧ್ಯೆ ಶ್ರೀ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದ್ದು, ನಂತರದಲ್ಲಿ ಪ್ರತಿದಿನ ಸುಮಾರು ಎರಡು ಲಕ್ಷ ಭಕ್ತರು ಭೇಟಿ ನೀಡುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ದರ್ಶನದ ಸಮಯವನ್ನು 18 ಗಂಟೆಗೆ ವಿಸ್ತರಿಸಲು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಚಿಂತನೆ ನಡೆಸಿದೆ. ಜನವರಿ 22ರಂದು ದೇಶದ ವಿವಿಧಧೆಡೆ 5ಲಕ್ಷಕ್ಕೂ ಅಧಿಕ ಮಂದಿರಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ರಾಮ ಮಂದಿರ ಉದ್ಘಾಟನೆಯ ನಂತರ ಅಯೋಧ್ಯೆಗೆ ಭಾರಿ ಸಂಖ್ಯೆಯ ಭಕ್ತರು ಭೇಟಿ ನೀಡುವ ಕಾರಣ ಭಕ್ತರಿಗೆ ನಿರಾಸೆಯಾಗದಂತೆ 18 ಗಂಟೆವರೆಗೆ ದರ್ಶನ ಸಮಯ ವಿಸ್ತರಿಸಲು ಟ್ರಸ್ಟ್ ಮುಂದಾಗಿದೆ.