ಚಿತ್ರದುರ್ಗ : ಮಗ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪಿಗಳಿಗೆ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹಿಡಿಶಾಪ ಹಾಕಿದ್ದಾರೆ.
ಮಗನನ್ನು ಕಳೆದುಕೊಂಡ ನೋವಿನಲ್ಲಿರುವ ರೇಣುಕಾಸ್ವಾಮಿ ತಾಯಿ ನಟ ದರ್ಶನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ದರ್ಶನ್ ನನ್ನು ಸಿನಿಮಾ ಇಂಡಸ್ಟ್ರಿಯಿಂದಲೇ ಬ್ಯಾನ್ ಮಾಡ್ಬೇಕು ಎಂದು ರೇಣುಕಾಸ್ವಾಮಿ ತಾಯಿ ಆಕ್ರೋಶ ಹೊರ ಹಾಕಿದ್ದಾರೆ.
ದರ್ಶನ್ ರ ಯಾವುದೇ ಸಿನಿಮಾಗಳನ್ನು ರಿಲೀಸ್ ಮಾಡಬಾರದು. ನನ್ನ ಮಗನಿಗೆ ಆದ ಸ್ಥಿತಿ ಇವನಿಗೆ ಆಗಬೇಕು. ಅವರ ಕುಟುಂಬವೇ ಸರ್ವನಾಶವಾಗಬೇಕು ಎಂದು ಹಿಡಿಶಾಪ ಹಾಕಿದ್ದಾರೆ. ನನ್ನ ಪತಿಯನ್ನು ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ನಮ್ಮ ಕುಟುಂಬಕ್ಕೆ ಯಾರು ದಿಕ್ಕು..? ಅವರನ್ನು ವಾರ್ನ್ ಮಾಡಿ ಬಿಡಬಹುದಿತ್ತು ಎಂದು ರೇಣುಕಾಸ್ವಾಮಿ ಪತ್ನಿ ಕೂಡ ಕಣ್ಣೀರಿಟ್ಟಿದ್ದಾರೆ.