
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ನೋಡಲೆಂದು ಅಭಿಮಾನಿಗಳು, ಆಪ್ತರು, ಕುಟುಂಬದವರು ಜೈಲಿನತ್ತ ತೆರಳಿ, ಭೇಟಿಗಾಗಿ ಕಾಯುತ್ತಿರುತ್ತಾರೆ. ಇದರಿಂದ ಮುಜುಗರಕ್ಕೀಡಾಗಿರುವ ನಟ ದರ್ಶನ್, ಯಾರೂ ಜೈಲಿನ ಬಳಿ ಬರಬೇಡಿ ಎಂದು ಮತ್ತೆ ಮನವಿ ಮಾಡಿದ್ದಾರೆ.
ನನ್ನನ್ನು ಭೇಟಿಯಾಗಲು ಯಾರೂ ಬರಬೇಡಿ ಕುಟುಂಬದವರನ್ನು ಹೊರತುಪಡಿಸಿ ಯಾರೂ ಭೇಟಿಗೆ ಬರಬೇಡಿ. ಭೇಟಿಗೆ ಬಂದವರನ್ನು ಜೈಲಿನಲ್ಲಿ ನೋಡುವುದು ನನಗೂ ಬೇಸರವಾಗುತ್ತದೆ, ನೋವುಂಟಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ಮುಂದೆ ಕುಟುಂಬದವರಿಗೆ ಮಾತ್ರ ಭೇಟಿಗೆ ಅವಕಾಶವಿರಲಿ. ಅಭಿಮಾನಿಗಳು ಶಾಂತವಾಗಿರಿ ಎಂದು ದರ್ಶನ್ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ಒಂದೂವರೆ ತಿಂಗಳಾಗಿದ್ದು, ಆಪ್ತರು, ಸಿನಿತಾರೆಯರು, ಅಭಿಮಾನಿಗಳು ಜೈಲಿನ ಬಳಿ ತೆರಳಿ ದರ್ಶನ್ ಭೇಟಿ ಮಾಡುತ್ತಿದ್ದಾರೆ. ಆದರೆ ದರ್ಶನ್ ಭೇಟಿಗೆ ಎಲ್ಲರಿಗೂ ಅವಕಾಶ ಸಿಗುತ್ತಿಲ್ಲ. ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಭೇಟಿಯಾಗಲು ದರ್ಶನ್ ಇಷ್ಟಪಡುತ್ತಿಲ್ಲ ಎಂದು ತಿಳಿದುಬಂದಿದೆ.