ಬೆಂಗಳೂರು: ಗಣ್ಯಾತಿಗಣ್ಯರಿಂದ ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ PIL ವಿಚಾರಣೆ ನಡೆಸಲಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ನಟ ದರ್ಶನ್ ಅವರಿಗೆ ತಲಾ 250 ರೂಪಾಯಿ ದಂಡ ವಿಧಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಡಿ.ಕೆ. ಸುರೇಶ್ ಅವರಿಗೂ ದಂಡ ವಿಧಿಸಿರುವುದಾಗಿ ಪಿಐಎಲ್ ವಿಚಾರಣೆ ವೇಳೆಯಲ್ಲಿ ಹೈಕೋರ್ಟ್ ಗೆ ಸರ್ಕಾರದಿಂದ ಹೇಳಿಕೆ ನೀಡಲಾಗಿದೆ.
ಆರ್.ಆರ್. ನಗರ ಉಪ ಚುನಾವಣೆ ಪ್ರಚಾರದ ವೇಳೆ ಮಾರ್ಗಸೂಚಿ ಉಲ್ಲಂಘಿಸಲಾಗಿದೆ. ಮಾರ್ಗಸೂಚಿ ಉಲ್ಲಂಘನೆ ಬಗ್ಗೆ 18 ಎನ್.ಸಿ.ಆರ್. ದಾಖಲಾಗಿದೆ. ಬಿಜೆಪಿ ಯುವಮೋರ್ಚಾ ರ್ಯಾಲಿ ಆಯೋಜಕರ ಮೇಲೂ ಕೂಡಾ NDMA ಕಾಯ್ದೆಯಡಿ ಕೇಸು ದಾಖಲಿಸಿರುವುದಾಗಿ ಹೈಕೋರ್ಟ್ ಗೆ ಸರ್ಕಾರಿ ವಕೀಲ ವಿಕ್ರಂ ಹುಯಿಲಗೋಳ ಹೇಳಿಕೆ ನೀಡಿದ್ದಾರೆ.
ವಕೀಲರಾದ ಪುತ್ತಿಗೆ ರಮೇಶ್, ಜಿ.ಆರ್. ಮೋಹನ್ ಅವರು ಪಿಐಎಲ್ ಸಲ್ಲಿಸಿದ್ದರು. ವಿಚಾರಣೆಯನ್ನು ನವೆಂಬರ್ 11 ಕ್ಕೆ ಹೈಕೋರ್ಟ್ ಮುಂದೂಡಿದೆ ಎಂದು ಹೇಳಲಾಗಿದೆ.