ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತಿ ಪಡೆದಿದ್ದ ದರ್ಶನ್ ಇತ್ತೀಚಿಗೆ ರೇಣುಕಾ ಸ್ವಾಮಿ ಕೊಲೆ ಆರೋಪದಿಂದ ಜೈಲು ಪಾಲಾಗಿದ್ದಾರೆ, ದರ್ಶನ್ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲೆ ಇನ್ನು ನಂಬಿಕೆ ಇಟ್ಟಿದ್ದಾರೆ. ಇದರ ಬೆನ್ನಲ್ಲೇ 2005ರಲ್ಲಿ ತೆರೆಕಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸೂಪರ್ ಡೂಪರ್ ಹಿಟ್ ಚಿತ್ರ ಶಾಸ್ತ್ರಿ ಇದೀಗ ಮರು ಬಿಡುಗಡೆಯಾಗುತ್ತಿದೆ. ಈ ಕುರಿತು ವಿತರಕ ವಿ.ಎಂ.ಶಂಕರ್ ಮಾಧ್ಯಮ ಒಂದರಲ್ಲಿ ತಿಳಿಸಿದ್ದಾರೆ. ಕಳೆದ ತಿಂಗಳು ಜೂನ್ ಹತ್ತಕ್ಕೆ ಈ ಸಿನಿಮಾ ತೆರೆಯ ಮೇಲೆ ಬಂದು 19 ವರ್ಷಗಳಾಗಲಿದೆ.
ಪಿಎನ್ ಸತ್ಯ ನಿರ್ದೇಶನದ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೋಡಿಯಾಗಿ ಮಾನ್ಯ ಅಭಿನಯಿಸಿದ್ದು, ಚಿತ್ರಾ ಶೆಣೈ, ಬುಲೆಟ್ ಪ್ರಕಾಶ್, ಹನುಮಂತೆ ಗೌಡ, ಜಿ ಕೆ ಗೋವಿಂದ ರಾವ್, ಸತ್ಯಜಿತ್ ಬಣ್ಣ ಹಚ್ಚಿದ್ದಾರೆ. ನಮನ ಪಿಚ್ಚರ್ಸ್ ಬ್ಯಾನರ್ ನಡಿ ಅಣಜಿ ನಾಗರಾಜ್ ನಿರ್ಮಾಣ ಮಾಡಿದ್ದರು. ಸಾಧುಕೋಕಿಲ ಸಂಗೀತ ಸಂಯೋಜನೆ ನೀಡಿದ್ದು, ಎಸ್ ಮನೋಹರ್ ಅವರ ಸಂಕಲನವಿದೆ.