ಬೆಂಗಳೂರು: ನಟ ದರ್ಶನ್ ಮತ್ತು ತಂಡದಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡಕ್ಕೆ ಮತ್ತೆ ಇನ್ ಸ್ಪೆಕ್ಟರ್ ಗಿರೀಶ್ ನಾಯ್ಕ್ ಸೇರ್ಪಡೆಯಾಗಿದ್ದಾರೆ.
ದರ್ಶನ್ ಅವರನ್ನು ಮೈಸೂರಿನಿಂದ ಎಸಿಪಿ ಚಂದನ್, ಗಿರೀಶ್ ನಾಯ್ಕ್ ಕರೆದುಕೊಂಡು ಬಂದಿದ್ದರು. ಮೊದಲು ಕೊನೆ ಪ್ರಕರಣದಲ್ಲಿ ಗಿರೀಶ್ ನಾಯ್ಕ್ ತನಿಕಾದಿಕಾರಿಯಾಗಿದ್ದರು. ಚುನಾವಣೆ ನಿಮಿತ್ತ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಗಿರೀಶ್ ನಾಯ್ಕ್ ವರ್ಗಾವಣೆಯಾಗಿದ್ದರು. ಬಳಿಕ ಮತ್ತೆ ಸಿ.ಕೆ. ಅಚ್ಚುಕಟ್ಟು ಠಾಣೆಗೆ ಗಿರೀಶ್ ವರ್ಗಾವಣೆಗೊಂಡಿದ್ದರು.
ಎಸಿಕೆಪಿ ಚಂದನ್ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಆರೋಪಿಗಳ ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಗಿರೀಶ್ ನಾಯ್ಕ್ ಅವರನ್ನು ಮತ್ತೆ ಸಹಾಯಕ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.