
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲುನಲ್ಲಿರುವ ನಟ ದರ್ಶನ್ ಅವರನ್ನು ನಟ, ನಿರ್ದೇಶಕ ಪ್ರೇಮ್, ನಟಿ ರಕ್ಷಿತಾ ದಂಪತಿ ಭೇಟಿಯಾಗಿದ್ದಾರೆ.
ಇಂದು ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ ರಕ್ಷಿತಾ, ಪ್ರೇಮ್ ಜೈಲಿನಲ್ಲಿರುವ ದರ್ಶನ್ ವರನ್ನು ಭೇಟಿಯಾಗಿ ಧೈರ್ಯ ಹೇಳಿದ್ದಾರೆ.
ಭೇಟಿ ಬಳಿಕ ಮಾತನಾಡಿದ ರಕ್ಷಿತಾ, 15- 20 ದಿನಗಳಿಂದ ಆಗಿರುವುದು ದುರದೃಷ್ಟಕರ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ ಎಂದು ಹೇಳಿದ್ದಾರೆ.