
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಂದು ಜೈಲಿನಿಂದ ಐವರು ಆರೋಪಿಗಳು ಬಿಡುಗಡೆಯಾಗಲಿದ್ದಾರೆ.
ಧನರಾಜ್, ನಂದೀಶ್, ವಿನಯ್, ರಾಘವೇಂದ್ರ, ಪವನ್ ಅವರಿಗೆ ಜಾಮೀನು ದೊರೆತಿದೆ. ನಿನ್ನೆ ಐವರು ಆರೋಪಿಗಳಿಗೆ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಇಂದು ಷರತ್ತು ಪೂರೈಸಿ ಐವರು ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಸದ್ಯ ಸೆರೆವಾಸದಿಂದ ಪ್ರಕರಣದ ಎಲ್ಲಾ 17 ಆರೋಪಿಗಳು ಮುಕ್ತಿ ಪಡೆದಂತಾಗಿದೆ. ಈಗಾಗಲೇ ದರ್ಶನ್, ಪವಿತ್ರಾಗೌಡ ಸೇರಿದಂತೆ 12 ಜನ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ.