ಬೆಂಗಳೂರು: ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾರೆಡ್ಡಿ, ಪ್ರಕರಣದಲ್ಲಿ ಲೋಪ ಆಗಿರುವುದು ನಿಜ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಲೋಪವಾಗಿರುವುದು ನಿಜ. ಈ ಬಗ್ಗೆ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಪರಮೇಶ್ವರ್ ಅವರಿಗೆ ಆಗ್ರಹಿಸಿದರು.
ನಾನೂ ಕೂಡ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಅತ್ಯಂತ ಸ್ಟ್ರಿಕ್ಟ್ ಹಾಗೂ ಪ್ರಾಮಾಣಿಕ ಆಫೀಸರ್ ಗಳನ್ನು ಇಂಥ ಸ್ಥಳಕ್ಕೆ ಹಾಕಬೇಕು. ಆಗ ಮಾತ್ರ ಈ ರೀತಿ ಘಟನೆಗಳು ನಡೆಯಲ್ಲ. ಯಾರು ಸೌಲಭ್ಯಗಳನ್ನು ಕೊಟ್ಟಿದ್ದಾರೆ ಎಂಬುದು ಗೊತ್ತಾಗುತ್ತದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಳ ಹಂತದ ಸಿಬ್ಬಂದಿಗಳನ್ನು ಅಮಾನತು ಮಾಡಿದರೆ ಪ್ರಯೋಜನವಿಲ್ಲ. ಈ ಘಟನೆಯಲ್ಲಿ ಯಾವುದೇ ದೊಡ್ಡ ಅದಿಕಾರಿ ಇದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಇಂತಹ ಘಟನೆಗಳು ಮುಂದೆ ಮರುಕಳಿಸಲ್ಲ ಎಂದರು.
ಡಿಜಿಗಳಿಗೆ ಎಲ್ಲವೂ ಗೊತ್ತಿರುವುದಿಲ್ಲ. ಆದರೆ ಅವರು ಪರಿಶೀಲನೆ ಮಾಡುತ್ತಿರಬೇಕು. ಜೈಲಿಗೆ ಭೇಟಿ ಕೊಡುತ್ತಿರಬೇಕು. ಅಧಿಕಾರಿಗಳಿಗೆ ವಾರ್ನ್ ಮಾಡಬೇಕು. ನಮ್ಮ ಗೃಹ ಮಂತ್ರಿಗಳು ಅನುಭವಿಗಳಿದ್ದಾರೆ. ಇಂತಹ ಗಹ್ಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತಾರೆ ಎಂದರು.