alex Certify BIG NEWS : ನನ್ನ ಮೇಲೆ ಹಲ್ಲೆ ನಡೆಸಲು ದರ್ಶನ್ & ಗ್ಯಾಂಗ್ ಸ್ಕೆಚ್ ಹಾಕಿತ್ತು : ನಿರ್ಮಾಪಕ ಉಮಾಪತಿ ಸ್ಪೋಟಕ ಹೇಳಿಕೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ನನ್ನ ಮೇಲೆ ಹಲ್ಲೆ ನಡೆಸಲು ದರ್ಶನ್ & ಗ್ಯಾಂಗ್ ಸ್ಕೆಚ್ ಹಾಕಿತ್ತು : ನಿರ್ಮಾಪಕ ಉಮಾಪತಿ ಸ್ಪೋಟಕ ಹೇಳಿಕೆ.!

ಬೆಂಗಳೂರು : ಮೈಸೂರಿನ ಹೋಟೆಲ್ ಒಂದರಲ್ಲಿ ತಮ್ಮ ಮೇಲೂ ಸಹ ಹಲ್ಲೆಗೆ ದರ್ಶನ್ ಮತ್ತು ಗ್ಯಾಂಗ್ ಸ್ಕೆಚ್ ಹಾಕಿತ್ತು ಎಂದು ನಿರ್ಮಾಪಕ ಉಮಾಪತಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವಾಗ ಮಾತನಾಡಿದ ಉಮಾಪತಿ ರಾಬರ್ಟ್’ ಸಿನಿಮಾದ ಶೂಟಿಂಗ್ ವೇಳೆಯೂ ಸಹ ಕೆಲವು ದರ್ಶನ್ ಒರಟಾಗಿ ನಡೆದುಕೊಂಡಿದ್ದರು.  ಹೋಟೆಲ್ ನ ಟೇಬಲ್ ಮೇಲೆ ನನ್ನ ಮುಂದೆ ವೆಪನ್ ಇಟ್ಟು ಹೆದರಿಸಿದ್ರು, ನನ್ನನ್ನು ಅರೆಸ್ಟ್ ಮಾಡಲು ಹುನ್ನಾರ ನಡೆಸಿದ್ರು, ರಾಬರ್ಟ್ ಚಿತ್ರದ ಶೂಟಿಂಗ್ ವೇಳೆ ಸಾಕಷ್ಟು ಕಷ್ಟ ಕೊಟ್ಟಿದ್ದರು.  ತಪ್ಪು ಮಾಡಿದಾಗ ನಾನು ನೇರವಾಗಿ ಹೇಳುತ್ತಿದ್ದೆ, ಬುದ್ಧಿವಾದ ಹೇಳುತ್ತಿದ್ದೆ. ನಾನು ಯಾರ ಮೇಲಾದರೂ ಸಿಟ್ಟು ಮಾಡಿಕೊಂಡರೆ ದರ್ಶನ್ ಸಹ ನನಗೆ ಬುದ್ಧಿ ಹೇಳುತ್ತಿದ್ದರು. ಆದರೆ ಅವರು ಇಂದು ಕ್ಷಮಿಸಲಾಗದ ತಪ್ಪು ಮಾಡಿದ್ದಾರೆ ಎಂದರು. ಅವರಿಗಿರುವ ಸಿಟ್ಟು, ಅಹಂಕಾರವೇ ಅವರ ಈ ಸ್ಥಿತಿಗೆ ಕಾರಣ. ಒಂದು ಸಮಯದಲ್ಲಿ ನನ್ನ ಮೇಲೂ ಹಲ್ಲೆ ನಡೆಸಲು ದರ್ಶನ್ & ಗ್ಯಾಂಗ್ ಸ್ಕೆಚ್ ಹಾಕಿತ್ತು, ಅದೃಷ್ಟವಶಾತ್ ಅಂತಹ ಯಾವುದೇ ಘಟನೆ ನಡೆಯಲಿಲ್ಲ ಎಂದು ಹೇಳಿದ್ದಾರೆ.

ಕಳೆದ ಕೆಲವು ತಿಂಗಳ ಹಿಂದೆ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ಭಾರಿ ವಾಕ್ಸಮರ ನಡೆದಿತ್ತು. ಕಾಟೇರ’ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ನಡೆದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ನಟ ದರ್ಶನ್ ತಗಡು ಎಂಬ ಪದ ಬಳಸಿ ವಾಗ್ಧಾಳಿ ನಡೆಸಿದ್ದರು. ಅಯ್ಯೋ ತಗಡೇ ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಕೊಟ್ಟಿದ್ದು, ಮಾಡಿದ್ದನ್ನ ಹೇಳಬಾರದು. ಇಂತಹ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?, ಕಾಟೇರ ಟೈಟಲ್ ಕೊಟ್ಟಿದ್ದೇ ನಾನು. ಯಾಕೆ ಪದೇ ಪದೇ ನಮ್ಮ ಹತ್ರಾನೆ ಬಂದು ಬಂದು ಗುಮ್ಮುಸ್ಕೋತೀಯಾ.ಎಲ್ಲೋ ಇದ್ದಿಯಾ, ಚೆನ್ನಾಗಿದ್ದೀಯಾ. ಅಲ್ಲೇ ಇರು” ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಉಮಾಪತಿ ‘ದೇಹದಲ್ಲಿ ತೂಕ ಇದ್ದರೆ ಸಾಲದು, ಮಾತಿನಲ್ಲೂ ತೂಕ ಇರಬೇಕು ಎಂದು ನಟ ದರ್ಶನ್ ಗೆ ಟಾಂಗ್ ನೀಡಿದ್ದರು. ನಿಜವಾದ ತಗಡು ಯಾರು ಎಂಬುದು ಎಲ್ಲರಿಗೂ ಗೊತ್ತಾಗಲಿದೆ. ಅವರು ಹೊಟ್ಟೆ ತುಂಬಿರುವವರು ಏನೇನೋ ಮಾತನಾಡುತ್ತಾರೆ, ನಾವೆಲ್ಲಾ ಹಸಿದವರು ಮೂಲೆಯಲ್ಲಿ ಇರುತ್ತೇವೆ. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಹೀಗೆಯೇ ಜೀವನ ಇರುವುದಿಲ್ಲ, ಮುಂದೊಂದು ದಿನ ಬೀಳುತ್ತದೆ’’ ಎಂದು ಉಮಾಪತಿ ಶ್ರೀನಿವಾಸ್ ಹೇಳಿದ್ದರು. ಈಗ ಉಮಾಪತಿ ಶ್ರೀನಿವಾಸ್ ಮಾತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅದನ್ನು ಉಮಾಪತಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

 

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...