ಬೆಂಗಳೂರು: ಕೃಷಿ ಇಲಾಖೆ ಯೋಜನೆ, ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸಲು ಮತ್ತು ರೈತರಿಗೆ ಹಾಗೂ ವಿಶೇಷವಾಗಿ ಯುವಕರಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಕೃಷಿ ಕಾಯಕದ ರಾಯಭಾರಿಯಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪದಗ್ರಹಣ ಸಮಾರಂಭ ಇಂದು ನಡೆಯಿತು.
ದರ್ಶನ್ ಅವರನ್ನು ಸಿಎಂ ಯಡಿಯೂರಪ್ಪ ಅಭಿನಂದಿಸಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿದ್ದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಜನಪ್ರಿಯ ನಟ ದರ್ಶನ್ ಸಂಭಾವನೆ ಇಲ್ಲದೆ ಕೃಷಿ ರಾಯಭಾರಿಯಾಗಿರುವುದು ಸಂತಸದ ವಿಚಾರವಾಗಿದೆ. ಮಾರ್ಚ್ 11 ರಂದು ‘ರಾಬರ್ಟ್’ ಸಿನಿಮಾ ಬಿಡುಗಡೆಯಾಗುತ್ತಿದೆ. ನೀವು ಸಿನಿಮಾ ನೋಡಿ, ನಾನು ನೋಡುತ್ತೇನೆ ಎಂದು ಹೇಳಿದ್ದಾರೆ.
ಬಿ.ಸಿ. ಪಾಟೀಲ್ ಮೊದಲು ಪೊಲೀಸ್ ಇಲಾಖೆಯಲ್ಲಿದ್ದರು. ಬಳಿಕ ಸಿನಿಮಾಗೆ ಬಂದರು. ಈಗ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ ದರ್ಶನ್, ರೈತರು ಮತ್ತು ನಮ್ಮದು ಎಮೋಷನಲ್ ಅಲ್ಲ. ಬ್ಲಡ್ ರಿಲೇಶನ್. ರೈತರು ಅನ್ನ ಕೊಟ್ಟರೆ ತಾನೇ ನಮಗೆ ರಕ್ತ ಎಂದು ಹೇಳಿದ್ದಾರೆ.
ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ದರ್ಶನ್ ಅವರು ಕೃಷಿ ಇಲಾಖೆಯ, ರೈತರ ಪರ ಕಾಳಜಿ ಹೊಂದಿದ್ದು ಕೃಷಿ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.