![](https://kannadadunia.com/wp-content/uploads/2024/06/darshan-yashas-surya.png)
ಬೆಂಗಳೂರು: ನಟ ದರ್ಶನ್ ಮತ್ತು ಸಹಚರರಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.
ಕೊಲೆ ನಡೆದ ದಿನ ರೆಸ್ಟೋ ಬಾರ್ ನಲ್ಲಿ ನಡೆದ ಪಾರ್ಟಿಯಲ್ಲಿ ಮತ್ತೊಬ್ಬ ನಟ ಭಾಗಿಯಾಗಿದ್ದ ಮಾಹಿತಿ ಗೊತ್ತಾಗಿದೆ. ‘ಗರಡಿ’ ಚಿತ್ರದ ನಟ ಯಶಸ್ ಸೂರ್ಯ ಪಾರ್ಟಿಯಲ್ಲಿ ಭಾಗವಹಿಸಿದ್ದು, ಪ್ರಕರಣದ ಸಂಬಂಧ ಅವರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧಿತರಾಗಿದ್ದು, ಅಂದು ದರ್ಶನ್ ಅವರೊಂದಿಗೆ ಪಾರ್ಟಿಯಲ್ಲಿ ಜೊತೆಯಾಗಿದ್ದ ನಟ ಚಿಕ್ಕಣ್ಣ ಅವರ ವಿಚಾರಣೆ ನಡೆಸಲಾಗಿದೆ. ಈಗ ನಟ ಯಶಶ್ ಸೂರ್ಯ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.