ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ವಿರುದ್ಧ ಗಂಭೀರ ಆರೋಪವಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ್ದಾರೆ.
ದರ್ಶನ್ ಹಣ ಬಲ, ಅಭಿಮಾನಿ ಬಳಗ ಬಳಸಿಕೊಂಡು ರೇಣುಕಾಸ್ವಾಮಿಯನ್ನು ಅಪಹರಿಸಿದ್ದಾರೆ. ರೇಣುಕಾಸ್ವಾಮಿ ಬೆದರಿಸಿ ಚಿನ್ನಾಭರಣವನ್ನು ಬಿಚ್ಚಿಸಿಕೊಂಡಿದ್ದಾರೆ. ನಂತರ ವಿನಯ್ ಸಂಬಂಧಿ ಶೆಡ್ ಗೆ ಕರೆತಂದು ಅಮಾನುಷವಾಗಿ ಹಲ್ಲೆ ಮಾಡಲಾಗಿದೆ. ಶೆಡ್ ನಲ್ಲಿ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಪವಿತ್ರಾ ಗೌಡ ಸೇರಿ ಎಲ್ಲರೂ ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ನಟ ದರ್ಶನ್, ಧನರಾಜ್, ವಿನಯ್, ಪ್ರದೋಶ್ ತನಿಖೆಗೆ ಸ್ಪಂದಿಸುತ್ತಿಲ್ಲ. ಕೃತ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಮರೆಮಾಚುತ್ತಾ ಬಂದಿದ್ದಾರೆ ಎಂದು ಕೋರ್ಟಿಗೆ ಮಾಹಿತಿ ನೀಡಲಾಗಿದೆ.
ನಿನ್ನೆ ಎ2 ದರ್ಶನ್ ಮನೆಯಿಂದ 37 ಲಕ್ಷ ರೂ., ಪತ್ನಿಗೆ ನೀಡಿದ್ದ ಮೂರು ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಹಣದ ಮೂಲದ ಬಗ್ಗೆ ನಟ ದರ್ಶನ್ ತನಿಖೆ ಅಗತ್ಯವಿದೆ. ಕೊಲೆಯಾದ ನಂತರ ದರ್ಶನ್ ಹಲವಾರು ವ್ಯಕ್ತಿಗಳನ್ನು ಸಂಪರ್ಕಿಸಿರುವುದು ಪತ್ತೆಯಾಗಿದೆ. ಅದರ ಉದ್ದೇಶ, ಕಾರಣ ಪತ್ತೆಗೆ ಎರಡು ದಿನ ದರ್ಶನ್ ಕಸ್ಟಡಿ ಅಗತ್ಯವಿದೆ ಎಂದು ಹೇಳಲಾಗಿದೆ.
ಎ14 ಪ್ರದೋಶ್ ಸಾಕ್ಷ್ಯ ನಾಶಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಕೊಲೆ ಪ್ರಕರಣದ ತನಿಖೆಗೆ ಸರಿಯಾಗಿ ಸ್ಪಂದಿಸದೆ ವಿಷಯ ಮರೆಮಾಚಿದ್ದಾನೆ. ಯಾವ ವ್ಯಕ್ತಿ ತನ್ನ ಜೊತೆ ಬಂದಿದ್ದ ಎಂಬುದರ ಬಗ್ಗೆ ಆತನಿಗೆ ಮಾತ್ರ ಗೊತ್ತು ಎನ್ನಲಾಗಿದೆ.
ಇನ್ನು ಚಾರ್ಜರ್ ಬ್ಯಾಟರಿ ಎಲ್ಲಿಂದ ತಂದಿದ್ದೆ ಎಂಬುದನ್ನು ಹೇಳದ ಎ9 ಧನರಾಜ್ ನನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೊಡುವೆಂತೆ ಕೋರಲಾಗಿದೆ.
ಎ10 ವಿನಯ್ ಮೊಬೈಲ್ ನಲ್ಲಿ ಮಹತ್ವದ ಸಾಕ್ಷ್ಯ ದೊರೆತಿದೆ. ಅದನ್ನು ಕಳುಹಿಸಿದ ವ್ಯಕ್ತಿ ಯಾರೆಂಬ ಬಗ್ಗೆ ತನಿಖೆಗಾಗಿ ವಿನಯ್ ಕಸ್ಟಡಿ ಅಗತ್ಯವಿದೆ ಎಂದು ಹೇಳಲಾಗಿದೆ.