
ಬೆಂಗಳೂರು: ನಟ ದರ್ಶನ್ ಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ. ಪತ್ನಿ ವಿಜಯಲಕ್ಷ್ಮೀ ಮಗ ವಿನೀಶ್ ಜೊತೆ ಸಿಂಪಲ್ ಆಗಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಈಬಾರಿ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ವಾರದ ಹಿಂದೆಯೇ ಅಭಿಮಾನಿಗಳಿಗೆ ವಿಡಿಯೋ ಸಂದೇಶದ ಮೂಲಕ ದರ್ಶನ್ ತಿಳಿಸಿದ್ದರು.
ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಭಿಮಾನಿಗಳು ದರ್ಶನ್ ಗೆ ಹುಟ್ಟುಹಬ್ಬದ ಶುಭ ಕೋರಿ ಬೃಹತ್ ಬ್ಯಾನರ್ ಗಳನ್ನು ಅಳವಡಿಸುವ ಮೂಲಕ ಸಂಭ್ರಮಿಸಿದ್ದಾರೆ. ಆದರೆ ಹೀಗೆ ಅಳವಡಿಸಿದ್ದ ಬ್ಯಾನರ್ ಗಳನ್ನು ನಗರಸಭೆ ತೆರವುಗೊಳಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೆಇಬಿ ವೃತ್ತದಲ್ಲಿ ನಟ ದರ್ಶನ್ ಜನ್ಮದಿನಕ್ಕೆ ಶುಭಾಷಯಗಳ ಕೋರಿ ಅಳವಡಿಸಲಾಗಿದ್ದ ಬ್ಯಾನರ್ ಗಳನ್ನು ನಗರಸಭೆ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ಇದೇ ವೇಳೆ ಇತರ ಬ್ಯಾನರ್ ಗಳನ್ನು ಕೂಡ ತೆರವು ಮಾಡಿದ್ದಾರೆ.