ಬಳ್ಳಾರಿ: ಬೆಂಗಳೂರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಸ್ಥಳಾಂತರಗೊಂಡ ನಟ ದರ್ಶನ್ ಗೆ ಅನಾರೋಗ್ಯ ಉಂಟಾಗಿದೆ ಎಂಬ ವದಂತಿ ಸುಳ್ಳು ಎಂದು ಬಳ್ಳಾರಿ ಎಸ್.ಪಿ. ಸ್ಪಷ್ಟಪಡಿಸಿದ್ದಾರೆ.
ಜೈಲಿಗೆ ಭೇಟಿ ನೀಡಿದ ಬಳಿಕ ಮಾಹಿತಿ ನೀಡಿದ ಎಸ್.ಪಿ. ಶೋಭಾ ರಾಣಿ ಅವರು, ಜೈಲಿನಲ್ಲಿರುವ ದರ್ಶನ್ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ.
ದರ್ಶನ್ ಧರಿಸಿದ್ದ ಕಡಗ, ದಾರ ಬಿಚ್ಚಿಸಲಾಗಿದೆ. ಕೂಲಿಂಗ್ ಗ್ಲಾಸ್ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಜೈಲಿನ ನಿಯಮಗಳನ್ನು ದರ್ಶನ್ ಪಾಲನೆ ಮಾಡುತ್ತಿದ್ದಾರೆ. ಜೈಲಿನ ನಿಯಮದಂತೆ ಅವರ ಕುಟುಂಬದವರಿಗೆ ಭೇಟಿಗೆ ಅವಕಾಶವಿರುತ್ತದೆ. ಯಾರು ಬರುತ್ತಾರೆ ಎಂಬ ಮಾಹಿತಿ ಇಲ್ಲ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಪ್ರತಿಕ್ರಿಯೆ ನೀಡಿದ್ದಾರೆ.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ ರಾತ್ರಿ ಊಟ ಮಾಡಿದ್ದಾರೆ. ಜೈಲಿನ ನಿಯಮದಂತೆ ಎರಡು ಚಪಾತಿ, ಪಲ್ಯ, ಅನ್ನ –ಸಾಂಬಾರ್, ಮಜ್ಜಿಗೆ ನೀಡಲಾಗಿದೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ಜೈಲಿನಲ್ಲಿ ದರ್ಶನ್ ಊಟ ನಿರಾಕರಿಸಿದ್ದರು. ರಾತ್ರಿ ಜೈಲಿನ ನಿಗದಿತ ಸಮಯದಂತೆ ಸಂಜೆ 7 ಗಂಟೆಗೆ ಸಾಮಾನ್ಯ ಕೈದಿಗಳಂತೆ ಊಟ ಮಾಡಿದ್ದಾರೆ.