
ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಸೇರಿದಂತೆ ಕಾರ್ತಿಕೇಯ ಕೃಷ್ಣ, ಜಾಕಿ ಶ್ರಾಫ್, ಅರುಣ್ ವಿಜಯ್, ನೀಲ್ ನಿತಿನ್ ಮುಖೇಶ್, ಮುರಳಿ ಶರ್ಮಾ, ಪ್ರಕಾಶ್ ಬೆಳವಾಡಿ, ಮಹೇಶ್ ಮಂಜ್ರೇಕರ್, ವೆನ್ನೆಲ ಕಿಶೋರ್, ಮಂದಿರಾ ಬೇಡಿ, ಸುಪ್ರೀತ್, ಎವೆಲಿನ್ ಶರ್ಮಾ, ಶರತ್ ಲೋಹಿತಾಶ್ವ, ದೇವನ್, ಬಣ್ಣ ಹಚ್ಚಿದ್ದು, ಯು ವಿ ಕ್ರಿಯೇಶನ್ಸ್ ಮತ್ತು ಟಿ ಸೀರೀಸ್ ಬ್ಯಾನರ್ ನಲ್ಲಿ ವಂಶಿ ಹಾಗೂ ಪ್ರಮೋದ್ ನಿರ್ಮಾಣ ಮಾಡಿದ್ದಾರೆ. ಶ್ರೀಕಾರ್ ಪ್ರಸಾದ್ ಸಂಕಲನ, ಸುಜಿತ್ ಅವರ ಸಂಭಾಷಣೆ, ವೈಭವಿ ಮರ್ಚೆಂಟ್ ಹಾಗೂ ರಾಜು ಸುಂದರಂ ನೃತ್ಯ ನಿರ್ದೇಶನ ಮತ್ತು ಮಾದಿ ಅವರ ಛಾಯಾಗ್ರಾಣವಿದೆ.