ರಾಜಗುರು ನಿರ್ದೇಶನದ ಗೌರಿಶಂಕರ್ ಅಭಿನಯದ ‘ಕೆರೆ ಬೇಟೆ’ ಚಿತ್ರ ಅಂದುಕೊಂಡಂತೆ ಭರ್ಜರಿ ಯಶಸ್ಸು ಕಂಡಿದ್ದು, ತನ್ನ ನಾಗಲೋಟವನ್ನು ಮುಂದುವರಿಸಿದೆ. ಸ್ಯಾಂಡಲ್ ವುಡ್ ನ ಹಲವಾರು ತಾರೆಯರು ಈ ಸಿನಿಮಾ ಗೆ ಸಪೋರ್ಟ್ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಡಾರ್ಲಿಂಗ್ ಕೃಷ್ಣ ಮತ್ತು ಅವರ ಪತ್ನಿ ಮಿಲನ ನಾಗರಾಜ್ ಒರಿಯನ್ ಮಾಲ್ ನಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರದಲ್ಲಿ ಗೌರಿಶಂಕರ್ ಗೆ ಜೋಡಿಯಾಗಿ ಬಿಂದು ಶಿವರಾಂ ಅಭಿನಯಿಸಿದ್ದು, ಜನಮನ ಸಿನಿಮಾಸ್ ಬ್ಯಾನರ್ ನಡಿ ಜೈ ಶಂಕರ್ ಪಾಟೀಲ್ ನಿರ್ಮಾಣ ಮಾಡಿದ್ದಾರೆ, ಹಿರಿಯ ಕಲಾವಿದ ಗೋಪಾಲ್ ದೇಶ್ಪಾಂಡೆ ಸೇರಿದಂತೆ ಸಂಪತ್ ಮೈತ್ರಿಯ, ಹರಿಣಿ ಶ್ರೀಕಾಂತ್, ಚಿಲ್ಲರ್ ಮಂಜು, ರಾಜೇಶ್ ಪೂಜಾರಿ, ವರ್ಧನ್ ತೀರ್ಥಹಳ್ಳಿ, ರಾಮದಾಸ್, ರಘುರಾಮ್ ರಾಜನಂದ ತೆರೆ ಹಂಚಿಕೊಂಡಿದ್ದಾರೆ. ಜ್ಞಾನೇಶ್ ಬಿ ಮಾತಾಡ್ ಸಂಕಲನ, ಕೀರ್ತಿ ಪೂಜಾರಿ ಛಾಯಾಗ್ರಹಣವಿದೆ.