ಬೇಸಗೆಯ ಬೇಗೆ ತನ್ನ ಪ್ರತಾಪ ತೋರಿಸಿ, ಮಳೆಗಾಲ ಆರಂಭವಾಗಿದೆ. ಈ ಸಂದರ್ಭದಲ್ಲಿ ಬಿಸಿಲಿಗೆ ನಿಮ್ಮನ್ನು ನೀವು ಒಗ್ಗಿಕೊಂಡಾಗ ತ್ವಚೆಯ ಹಲವು ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಡಾರ್ಕ್ ಸ್ಪಾಟ್ ಕೂಡಾ ಅದರಲ್ಲೊಂದು.
ಡಾರ್ಕ್ ಸ್ಪಾಟ್ ಸಮಸ್ಯೆ ನಿಮ್ಮನ್ನು ಬಾಧಿಸುತ್ತಿದ್ದರೆ ಈ ಮನೆ ಮದ್ದನ್ನು ಬಳಸಿ ನಿಮ್ಮ ಸಮಸ್ಯೆ ನಿವಾರಿಸಿಕೊಳ್ಳಿ.
ನಿಂಬೆ ರಸವನ್ನು ಮುಖಕ್ಕೆ ಹಚ್ಚಿ. ಕೈಯಲ್ಲಿ ಸಾಧ್ಯವಾಗದಿದ್ದರೆ ಹತ್ತಿ ಉಂಡೆಯನ್ನು ಈ ರಸದಲ್ಲಿ ಅದ್ದಿ ಕಲೆ ಇರುವ ಜಾಗಕ್ಕೆ ಹಚ್ಚಿ. ಕನಿಷ್ಠ 30 ನಿಮಿಷಗಳ ಬಳಿಕ ಮುಖ ತೊಳೆಯಿರಿ.
ನಾಲ್ಕು ಚಮಚ ಮೊಸರಿಗೆ ಎರಡು ಚಮಚ ಟೊಮೆಟೊ ರಸ ಸೇರಿಸಿ ಚೆನ್ನಾಗಿ ಬೆರೆಸಿ. ಹತ್ತಿಯ ಉಂಡೆಗಳನ್ನು ಹಾಲಿನಲ್ಲಿ ಅದ್ದಿ. ಕಲೆಗಳ ಮೇಲೆ ಹಚ್ಚಿಕೊಳ್ಳಿ. ಇವೆರಡೂ ಅತ್ಯುತ್ತಮ ಬ್ಲೀಚಿಂಗ್ ಗುಣ ಹೊಂದಿರುವುದರಿಂದ ಮುಖದ ಕಲೆಗಳನ್ನು ಬಹುಬೇಗ ದೂರಮಾಡುತ್ತದೆ.
ಅಲೋವೇರಾದಲ್ಲೂ ಈ ಉತ್ತಮ ಗುಣವಿದ್ದು ನಿತ್ಯ ಇದರ ಲೋಳೆಯನ್ನು ಮುಖಕ್ಕೆ ಹಚ್ಚಿ ತೊಳೆದರೆ ಡಾರ್ಕ್ ಸ್ಪಾಟ್ ಮಾತ್ರವಲ್ಲ, ಮೊಡವೆಗಳ ಕಲೆಗಳೂ ದೂರವಾಗುತ್ತವೆ. ಮುಖ ವಿಶೇಷ ಕಾಂತಿಯನ್ನು ಪಡೆದುಕೊಳ್ಳುತ್ತದೆ.