
2019 ರಲ್ಲಿ ತೆರೆ ಕಂಡ ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟ ದನ್ವೀರ್ ಗೌಡ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ತಮ್ಮ ಮಾಸ್ ಡೈಲಾಗ್ ಮೂಲಕ ಅಭಿಮಾನಿಗಳ ದೊಡ್ಡ ಪಡೆಯನ್ನೇ ಹೊಂದಿದ್ದಾರೆ. ದನ್ವೀರ್ ಗೌಡ ಇಂದು 28ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಧನ್ವೀರ್ ಗೌಡ ಇತ್ತೀಚಿಗೆ ವಾಮನ, ಬಂಪರ್ ಸೇರಿದಂತೆ ಜಯತೀರ್ಥ ನಿರ್ದೇಶನದ ‘ಕೈವ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಶಂಕರ್ ರಾಮನ್ ನಿರ್ದೇಶನದ ‘ವಾಮನ’ ಶೂಟಿಂಗ್ ಕೊನೆಯ ಹಂತದಲ್ಲಿದ್ದು, ಮುಂದಿನ ತಿಂಗಳಲ್ಲಿ ಬಿಡುಗಡೆಯಾಗಲಿದೆ. ದನ್ವೀರ್ ಗೌಡ ನಟನೆಯ ಬ್ಯಾಕ್ ಟು ಬ್ಯಾಕ್ ಆಕ್ಷನ್ ಸಿನಿಮಾಗಳು ತೆರೆ ಮೇಲೆ ಬರಲು ಸಜ್ಜಾಗಿವೆ.