ಬಾಲಿವುಡ್ ಹಾಡಿಗೆ ಯಾರು ತಾನೇ ಫೀದಾ ಆಗೋಲ್ಲ ಹೇಳಿ. ಹಾಡನ್ನ ಕೇಳ್ತಾ ಕೇಳ್ತಾ ಎಷ್ಟೋ ಜನ ಮೈ ಮರೆತು ಡಾನ್ಸ್ ಮಾಡ್ತಾರೆ. ಅದರಲ್ಲೂ ಪಂಜಾಬಿ ಸಿಂಗರ್ ದಲೇರ್ ಮೆಹಂದಿ ಹಾಡಿಗಂತೂ ಜನರು ಮೈ ಮರೆದು ಸ್ಟೆಪ್ ಹಾಕ್ತಾರೆ.
ಕೇವಲ ಭಾರತೀಯರು ಮಾತ್ರ ಅಲ್ಲ, ವಿದೇಶಗಳಲ್ಲೂ ದಲೇರ್ ಮೆಹಂದಿ ಹಾಡಿಗೆ ಅಭಿಮಾನಿಗಳಿದ್ದಾರೆ. ಇತ್ತಿಚೆಗೆ ಇವರು ಹಾಡಿದ್ದ ಹಾಡೊಂದಕ್ಕೆ ಅಭಿಮಾನಿಗಳು ಅಧ್ಬುವಾಗಿ ಡಾನ್ಸ್ ಮಾಡಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಡಾನ್ಸ್ ವಿಡಿಯೋ ಇನ್ನೊಂದು ವಿಶೇಷತೆ ಏನಂದ್ರೆ, ಇಲ್ಲಿ ಡಾನ್ಸ್ ಮಾಡ್ತಿರುವವರು ಭಾರತೀಯರಲ್ಲ ವಿದೇಶಿ ವಿದ್ಯಾರ್ಥಿಗಳು.
’ ತುಣಕ್….. ತುಣಕ್…… ತುಣಕ್ ತುಣಕ್…….. 1998ರಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ ದಲೇರ್ ಮೆಹಂದಿಯ ಅಲ್ಪ್ ಸಾಂಗ್. ಈ ಹಾಡು ಇಂದಿಗೂ ಜನರ ಕಿವಿಯಲ್ಲಿ ಗುಂಯ್ ಗುಡ್ತಿದೆ. ಈ ಹಾಡಿಗೇನೇ ಈಗ ಡೆನಿಷ್‌ನ ವಿದ್ಯಾರ್ಥಿಗಳು ಬಿಂದಾಸ್ ಆಗಿ, ಹುಕ್ ಸ್ಟೆಪ್ಸ್‌ಗಳನ್ನ ಹಾಕಿದ್ದಾರೆ.
ಸೂರ್ಯ ಮೆಮ್ಸ್ ಅನ್ನೊ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಈ ವೀಡಿಯೊವನ್ನ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಶೀರ್ಷಿಕೆಯಲ್ಲಿ “ ಇದು ಭಾರತೀಯ ಶೈಲಿಯ ಪರಿಚಯ“ ಎಂದು ಬರೆಯಲಾಗಿದೆ. ಸದ್ಯಕ್ಕೆ ಈ ವಿಡಿಯೋ ವೈರಲ್ ಆಗಿದ್ದು, 36 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ದಲೇರ್ ಮೆಹಂದಿಯ ಹಾಡುಗಳನ್ನ, ಸಂಗೀತ ಪ್ರೇಮಿಗಳು ಈಗಲೂ ಕೇಳಿ ಎಂಜಾಯ್ ಮಾಡುತ್ತಾರೆ. ಅಷ್ಟೆ ಅಲ್ಲ ಮದುವೆ-ಸಮಾರಂಭಗಳಲ್ಲಿ ದಲೇರ್ ಮೆಹಂದಿಯ ಹಾಡುಗಳನ್ನ ತಪ್ಪದೇ ಹಾಕುವುದಲ್ಲೇ ಕುಣಿದು ಕುಪ್ಪಳಿಸುತ್ತಾರೆ. ಕೇವಲ ಭಾರತದಲ್ಲಿ ಮಾತ್ರ ಅಲ್ಲ ವಿದೇಶದಲ್ಲಿಯೂ ದಲೇರ್ ಮೆಹಂದಿ ಹಾಡುಗಳಿಗೆ ಅಭಿಮಾನಿಗಳು ಇದ್ದಾರೆ, ಅನ್ನೋದಕ್ಕೆ ಆಗಾಗ ವೈರಲ್ ಆಗುತ್ತಿರುವ ಈ ರೀತಿಯ ವಿಡಿಯೋಗಳೇ ಸಾಕ್ಷಿಯಾಗಿದೆ.