
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಶೇಷ ಪ್ರತಿನಿಧಿಯಾಗಿ ಭರಪೂರ ಮನರಂಜನೆ ಕೊಡುವ ಮಿಸ್ಟರ್ ನಾಗ್ಸ್ ಅಕಾ ಡ್ಯಾನಿಶ್ ಸೇಠ್ ಈ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
ತಮ್ಮ ಹಾಸ್ಯಮಯ ಶೋಗಳ ಮೂಲಕ ಭಾರೀ ಜನಪ್ರಿಯರಾದ ಡ್ಯಾನಿಶ್ ಸೇಠ್, ಐಪಿಎಲ್ 2022 ಮೆಗಾ ಆಕ್ಷನ್‌ಗೂ ಮುನ್ನ ಹರಾಜಿನ ಕುರಿತು ತಮ್ಮ ಸಲಹೆಗಳನ್ನು ಕೊಟ್ಟಿದ್ದಾರೆ. ತಂಡದೊಂದಿಗೆ ತಮ್ಮ ಬಾಂಧವ್ಯ ಹಾಗೂ ಹಿರಿತನವನ್ನು ಪರಿಗಣಿಸಿ ತಮಗೊಂದು ಪಿಂಚಣಿ ಯೋಜನೆ ತರಬೇಕೆಂದು ಮಿ. ನಾಗ್ಸ್ ಇದೇ ವೇಳೆ ಆಗ್ರಹಿಸಿದ್ದಾರೆ.
ʼಹೆಲ್ಮೆಟ್ʼ ಬಳಕೆಯಿಂದ ಕೂದಲು ಉದುರದಂತೆ ಕಾಪಾಡಲು ಇಲ್ಲಿದೆ ಟಿಪ್ಸ್
ಆರ್‌ಸಿಬಿ ತನ್ನ ಅಧಿಕೃತ ಪೇಜ್‌ಗಳಲ್ಲಿ ಹಂಚಿಕೊಂಡ ಈ ವಿನೋದಮಯ ವಿಡಿಯೋದಲ್ಲಿ, ಡ್ಯಾನಿಶ್ ಆರ್‌ಸಿಬಿಯ ಹಿರಿಯ ಆಟಗಾರ ವಿರಾಟ್ ಕೊಹ್ಲಿಗೆ ಹುಸಿ ಕರೆ ಮಾಡುತ್ತಾ, “ಕಪಿಲ್ ದೇವ್‌ರ ಮೂವಿಯನ್ನು ಈಗಷ್ಟೇ ರಿಲೀಸ್ ಮಾಡಿದ ಕಾರಣ ಅವರನ್ನು ವೇಗದ ಬೌಲರ್ ಆಗಿ ಖರೀದಿಸಬಹುದೇ,” ಎಂದು ಕೇಳಿದ್ದಾರೆ. ಇದಾದ ಮೇಲೆ ಮಿ. ನಾಗ್ಸ್ ಆರ್‌ಸಿಬಿ ತಂಡದ ಮೀಟಿಂಗ್ ವೇಳೆ ಕೋಚ್‌ಗಳು ಹಾಗೂ ಮ್ಯಾನೇಜ್ಮೆಂಟ್‌ನೊಂದಿಗೆ ಚೇಷ್ಟೆ ಮಾಡುವುದನ್ನು ನೋಡಬಹುದಾಗಿದೆ.
34 ವರ್ಷದ ಡ್ಯಾನಿಶ್ ಸೇಠ್ ಸದ್ಯ ಭಾರೀ ಡಿಮ್ಯಾಂಡ್‌ನಲ್ಲಿರುವ ಕಾಮೆಡಿಯನ್ ಮಾತ್ರವಲ್ಲದೇ, ಟಿವಿ ನಿರೂಪಕ, ನಟ, ಯೂಟ್ಯೂಬರ್ ಮತ್ತು ರೇಡಿಯೋ ಪ್ರಾಂಕ್‌ಸ್ಟರ್ ಆಗಿದ್ದಾರೆ.