alex Certify BREAKING: ಮುಂಬೈ ಪ್ರವೇಶಿಸಿದ್ದಾನೆ ಅಪಾಯಕಾರಿ ವ್ಯಕ್ತಿ; ಚೀನಾ – ಪಾಕಿಸ್ತಾನದಲ್ಲಿ ತರಬೇತಿ; NIA ಯಿಂದ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮುಂಬೈ ಪ್ರವೇಶಿಸಿದ್ದಾನೆ ಅಪಾಯಕಾರಿ ವ್ಯಕ್ತಿ; ಚೀನಾ – ಪಾಕಿಸ್ತಾನದಲ್ಲಿ ತರಬೇತಿ; NIA ಯಿಂದ ಮಹತ್ವದ ಸೂಚನೆ

ಚೀನಾ ಪಾಕಿಸ್ತಾನ ಹಾಗೂ ಹಾಂಕಾಂಗ್ ನಲ್ಲಿ ತರಬೇತಿ ಪಡೆದಿರುವ ಅಪಾಯಕಾರಿ ವ್ಯಕ್ತಿ ವಾಣಿಜ್ಯ ನಗರಿ ಮುಂಬೈ ಪ್ರವೇಶಿಸಿದ್ದಾನೆ ಎನ್ನಲಾಗಿದ್ದು, ಈ ಕುರಿತಂತೆ ರಾಷ್ಟ್ರೀಯ ತನಿಖಾ ದಳ, ಮುಂಬೈ ಪೊಲೀಸರಿಗೆ ಕಟ್ಟೆಚ್ಚರ ವಹಿಸುವಂತೆ ಮಾಹಿತಿ ರವಾನಿಸಿದೆ.

ಮೂಲತಃ ಇಂದೋರ್ ನವನಾದ ಸರ್ಫ್ರಾಜ್ ಮೆಮೂನ್ ಈಗಾಗಲೇ ಮುಂಬೈ ತಲುಪಿದ್ದಾನೆ ಎನ್ನಲಾಗಿದ್ದು, ಆತನ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಮೊದಲಾದವುಗಳ ವಿವರವನ್ನು ಇ-ಮೇಲ್ ಮೂಲಕ ಕಳುಹಿಸಿಕೊಡಲಾಗಿದೆ.

ಆ ಬಳಿಕ ಮುಂಬೈ ಪೊಲೀಸರು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಇಂದೋರ್ ಪೊಲೀಸರಿಗೂ ಸಹ ವಿಷಯ ತಿಳಿಸಿದ್ದು, ಮುಂಬೈ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಶಂಕಿತನನ್ನು ಅಪಾಯಕಾರಿ ವ್ಯಕ್ತಿ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...