
ಬಾಗಲಕೋಟೆ: ಜನಸ್ಪಂದನ ಕಾರ್ಯಕ್ರಮದ ವೇದಿಕೆಯಲ್ಲಿ ಸಚಿವರು ಡ್ಯಾನ್ಸ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಚಿವರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ಮಾತನಾಡಿದ ಅವರು, ಥೂ… ಬಿಜೆಪಿ ನಾಯಕರಿಗೆ ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇದೆಯಾ? ಪ್ರವಾಹದಿಂದ ಜನರು ಸಾಯುತ್ತಿದ್ದಾರೆ, ನರಳುತ್ತಿದ್ದಾರೆ. ಸಚಿವರು ಡ್ಯಾನ್ಸ್ ಮಾಡುತ್ತಿದ್ದಾರೆ. ಇದು ಸಂತೋಷ ಪಡುವ ಕಾಲವೇ? ಖುಷಿಪಡುವ ಕಾಲವೇ? ಎಂದು ಪ್ರಶ್ನಿಸಿದ್ದಾರೆ.
ಮೊನ್ನೆಯಷ್ಟೇ ಪಾಪ ಸಚಿವರಾದ ಉಮೇಶ ಕತ್ತಿ ಮೃತಪಟ್ಟಿದ್ದಾರೆ. ಇವಕ್ಕೆ ಸ್ವಲ್ಪನಾದರೂ ಜವಾಬ್ದಾರಿ ಅನ್ನೋದೇ ಇಲ್ಲ ಎಂದು ಡ್ಯಾನ್ಸ್ ಮಾಡಿದ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇವರೆಲ್ಲ ಬೇಜವಾಬ್ದಾರಿ ಮಂತ್ರಿಗಳು. ರಾಜ್ಯದ ಜನರ ಬಗ್ಗೆ ಸರ್ಕಾರ, ಸಚಿವರಿಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.