alex Certify ಅಸ್ಸಾಂ ಸ್ಪರ್ಧಿಯ ಮೇಲೆ ನಿರೂಪಕ ಮಾಡಿದ್ರಾ ಜನಾಂಗೀಯ ನಿಂದನೆ..?‌ ಶುರುವಾಗಿದೆ ಹೀಗೊಂದು ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸ್ಸಾಂ ಸ್ಪರ್ಧಿಯ ಮೇಲೆ ನಿರೂಪಕ ಮಾಡಿದ್ರಾ ಜನಾಂಗೀಯ ನಿಂದನೆ..?‌ ಶುರುವಾಗಿದೆ ಹೀಗೊಂದು ಚರ್ಚೆ

ಭಾರತದ ಜನಪ್ರಿಯ ರಿಯಾಲಿಟಿ ಶೋ ಕಲರ್ಸ್ ನಲ್ಲಿ ಪ್ರಸಾರವಾಗುವ ʼಡ್ಯಾನ್ಸ್ ದೀವಾನೆʼ ಸೀಸನ್-3ರ ವಿಡಿಯೋ ಕ್ಲಿಪ್, ಜನಾಂಗೀಯ ನಿಂದನೆಯಾಗಿದೆ ವೈರಲ್ ಆಗಿರುವ ವಿಡಿಯೋದಲ್ಲಿ, ನಿರೂಪಕ ರಾಘವ್ ಜುಯಲ್ ಅಸ್ಸಾಂನ ಸ್ಪರ್ಧಿಯನ್ನು ಮೊಮೊ, ಚೌಮೇನ್ ಮತ್ತು ಗಿಬ್ಬರಿಶ್ ಚೈನೀಸ್ ಎಂಬ ಪದಗಳೊಂದಿಗೆ ಪರಿಚಯಿಸಿದ್ದಾರೆ. ಇದಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಹಲವಾರು ಮಂದಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಮಾಧುರಿ ದೀಕ್ಷಿತ್ ಮತ್ತು ರೆಮೋ ಡಿಸೋಜಾ ಅವರನ್ನು ಒಳಗೊಂಡ ತೀರ್ಪುಗಾರರೂ ಸಹ ಕಾರ್ಯಕ್ರಮದಲ್ಲಿ ಯಾವುದೇ ವಿರೋಧವನ್ನೂ ವ್ಯಕ್ತಪಡಿಸದೆ, ಜೋಕ್‌ ಕೇಳುತ್ತಾ ಪ್ರೇಕ್ಷಕರ ಜೊತೆಗೆ ನಕ್ಕಿದ್ದಾರೆ.

ಕ್ಲಿಪ್ ವೈರಲ್ ಆಗುತ್ತಿದ್ದಂತೆ, ಜನರು ಕಾರ್ಯಕ್ರಮವನ್ನು, ಅದರ ನಿರೂಪಕ ಮತ್ತು ತೀರ್ಪುಗಾರರನ್ನು ದೂಷಿಸಿದ್ದಾರೆ. ತಪ್ಪನ್ನು ತಿದ್ದಿಕೊಂಡು ಕ್ಷಮೆ ಯಾಚಿಸಬೇಕು ಎಂದೆಲ್ಲಾ ಜನರು ಆಗ್ರಹಿಸಿದ್ದಾರೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಕೂಡ ಟ್ವಿಟರ್‌ನಲ್ಲಿ ಘಟನೆಯನ್ನು ಖಂಡಿಸಿದ್ದಾರೆ.

ವ್ಯಾಪಕ ವಿರೋಧದ ಬೆನ್ನಲ್ಲೇ ಇನ್ಸ್ಟಾಗ್ರಾಂನಲ್ಲಿ ನಿರೂಪಕ ರಾಘವ್ ಹೇಳಿಕೆಯ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಸಂದರ್ಭವನ್ನು ಅರ್ಥ ಮಾಡಿಕೊಂಡು ವಿಡಿಯೋವನ್ನು ಪೂರ್ತಿಯಾಗಿ ನೋಡಿ ಎಂದು ಅವರು ಮನವಿ ಮಾಡಿದ್ದಾರೆ. ಕಿರು ಕ್ಲಿಪ್ ನೋಡಿ ವಿರೋಧಿಸುವುದು ಸಮ್ಮತವಲ್ಲ ಎಂದಿದ್ದಾರೆ.

ಈ ಸ್ಪರ್ಧಿ ಕಾರ್ಯಕ್ರಮಕ್ಕೆ ಬಂದಾಗ, ಅವರಿಗೆ ಚೈನೀಸ್ ಭಾಷೆ ಮಾತನಾಡಲು ಬರುವುದಾಗಿ ಹೇಳಿದ್ದರು. ಅದಕ್ಕಾಗಿ ಕಾರ್ಯಕ್ರಮದ ಅಂತ್ಯದ ವೇಳೆಗೆ, ಒಂದು ಸಂಚಿಕೆಯಲ್ಲಿ ಆಕೆಯನ್ನು ಪರಿಚಯಿಸಲು ಈ ರೀತಿ ಮಾತನಾಡಲು ನಿರ್ಧರಿಸಿದೆ. ಇದು ಕಾರ್ಯಕ್ರಮದ ಒಳಗಿನ ಹಾಸ್ಯವಾಗಿದೆ ಮತ್ತು ಆ ಕ್ಲಿಪ್‌ನ್ನು ನೋಡಿ ತನ್ನ ಬಗ್ಗೆ ನಿರ್ಣಯಿಸುವುದು ಸರಿಯಲ್ಲ, ಪೂರ್ತಿ ವಿಡಿಯೋ ನೋಡಿ ಎಂದು ಮನವಿ ಮಾಡಿದ್ದಾರೆ.

— Thajagee macha morambee gi mapari (@yongchakyaawol) November 15, 2021

https://www.instagram.com/p/CWS22nCqsQ9/?utm_source=ig_embed&ig_rid=afa868cb-3b7a-4f7a-a46b-cfd48373c8c6

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...