
ತುಮಕೂರು: ಮಾರ್ಕೋನಹಳ್ಳಿ ಡ್ಯಾಂ ನಲ್ಲಿ ಯುವತಿಯರಿಬ್ಬರು ನೀರುಪಾಲಾಗಿದ್ದಾರೆ. ಪರ್ವಿನಾ(17) ಹಾಗೂ ಸಾದಿಕಾ(22) ನೀರು ಪಾಲಾದವರು ಎಂದು ಹೇಳಲಾಗಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದಲ್ಲಿ ನೀರಿಗೆ ಇಳಿದಿದ್ದ ಸಂದರ್ಭದಲ್ಲಿ ನೀರಿನ ರಭಸ ಹೆಚ್ಚಾಗಿ ಯುವತಿಯರು ಕೊಚ್ಚಿ ಹೋಗಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.