ಉತ್ತರ ಪ್ರದೇಶದ ಅಮೇಥಿಯಲ್ಲಿ ದಲಿತ ಅಪ್ರಾಪ್ತ ಬಾಲಕಿಯನ್ನು ನಿರ್ದಯವಾಗಿ ಥಳಿಸಿರೊ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪ್ರಾಪ್ತೆಯ ಮೇಲಾಗಿರೊ ದೌರ್ಜನ್ಯವು ಆ ಪ್ರದೇಶದ ಜನರಲ್ಲಿ ಆಕ್ರೋಶ ಉಂಟುಮಾಡಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪಾಪಿಗಳನ್ನ ಹಿಡಿಯಿರಿ ಎಂದು ಸಾರ್ವಜನಿಕರು ಪೊಲೀಸರನ್ನ ಒತ್ತಾಯಿಸಿದ್ದಾರೆ.
ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಹುಡುಗಿಯನ್ನು ಥಳಿಸುತ್ತಿದ್ದು, ಇಬ್ಬರು ಕೋಲು ಬಳಸಿ ಅವಳನ್ನು ಹಿಡಿದಿದ್ದಾರೆ. ಕೆಲವು ಮಹಿಳೆಯರು ಸುತ್ತಲೂ ನಿಂತು, ಕಳ್ಳತನ ಮಾಡಿರುವುದನ್ನ ಒಪ್ಪಿಕೊ ಎಂದು ಕೇಳುತ್ತಿದ್ದಾರೆ. ಆ ವ್ಯಕ್ತಿ ದೊಣ್ಣೆಯಿಂದ ಥಳಿಸಲು ಮುಂದಾದಾಗ ಬಾಲಕಿ ಮನವಿ ಮಾಡುತ್ತಿರುವುದು ಕಂಡು ಬಂದಿದೆ. ಇನ್ನು ಮುಂದುವರೆದ ಅವನು ಅವಳ ಕೂದಲಿಡಿದು ಎಳೆಯುತ್ತಾನೆ ನಂತರ ಅವಳನ್ನು ಕೋಲಿನಿಂದ ಹೊಡೆಯುವುದನ್ನು ಮುಂದುವರಿಸುತ್ತಾನೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಮಂಗಳವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು, ಉತ್ತರ ಪ್ರದೇಶದ ಪೊಲೀಸರು ಆರೋಪಿಗಳನ್ನ 24 ಗಂಟೆಗಳ ಒಳಗೆ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಯುಪಿಯಲ್ಲಿ ಪ್ರತಿದಿನ ಸರಾಸರಿ 34 ದಲಿತರ ಮೇಲೆ ಮತ್ತು ಮಹಿಳೆಯರ ವಿರುದ್ಧ 135 ದೌರ್ಜನ್ಯಗಳು ನಡೆಯುತ್ತಿವೆ, ಆದರೂ ನಿಮ್ಮ ಆಡಳಿತ ನಿದ್ರಿಸುತ್ತಿದೆ ಎಂದು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಪ್ರಿಯಾಂಕ ವಾಗ್ದಾಳಿ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಪಿತ್ ಕಪೂರ್ ನಮನ್ ಸೋನಿ ಎಂಬ ವ್ಯಕ್ತಿಯನ್ನ, ಪೋಕ್ಸೊಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ , ಅಮೇಥಿ ಪೊಲೀಸರು ಬಂಧಿಸಿದ್ದು ಪ್ರಕರಣದ ಇತರ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
https://twitter.com/priyankagandhi/status/1476073591812722688?ref_src=twsrc%5Etfw%7Ctwcamp%5Etweetembed%7Ctwterm%5E1476073695835688960%7Ctwgr%5E%7Ctwcon%5Es2_&ref_url=https%3A%2F%2Fwww.india.com%2Fnews%2Findia%2Fcaught-on-camera-dalit-minor-girl-brutally-tortured-by-a-family-in-ups-amethi-one-arrested-5161316%2F