ಸಣ್ಣ ಜಗಳವೊಂದು ಜಾತಿ ವೈಷಮ್ಯಕ್ಕೆ ತಿರುಗಿ ದಲಿತ ಹುಡುಗನಿಂದ ಸವರ್ಣೀಯರು ಕಾಲು ನೆಕ್ಕಿಸಿ ದೌರ್ಜನ್ಯ ಎಸಗಿದ ಪ್ರಸಂಗ ರಾಯ್‌ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ತೀವ್ರಗೊಳಿಸಿದ್ದಾರೆ.
ಪತಿ ಕೋವಿಡ್ ಗೆ ಬಲಿಯಾದ 11 ತಿಂಗಳ ನಂತರ IVF ಮೂಲಕ ತಾಯಿಯಾದ ಮಹಿಳೆ…!
ಹುಡುಗನೊಬ್ಬ ಮೋಟಾರ್ ಬೈಕ್ ಮೇಲೆ ಕುಳಿತಿದ್ದ ಯುವಕನ ಪಾದ ನೆಕ್ಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅಧಿಕಾರಿಗಳಿಗೆ ಪ್ರಕರಣದ ಗಂಭೀರತೆಯ ಅರಿವಾಗಿದೆ
ಸ್ಥಳೀಯ ವಿದ್ಯಾರ್ಥಿಗಳು ಬಾಲಕನ ಮೇಲೆ ದೌರ್ಜನ್ಯ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಜಗತ್ ಪುರ ಪಟ್ಟಣದ ನಿವಾಸಿಯಾಗಿರುವ ಸಂತ್ರಸ್ತ ತನ್ನನ್ನು ವಿದ್ಯಾರ್ಥಿಗಳ ಗುಂಪೊಂದು ಏಕಾಂತ ಸ್ಥಳಕ್ಕೆ ಕರೆದೊಯ್ದು ಕಟ್ಟಿಹಾಕಿ ಥಳಿಸಿದ್ದರು ಎಂದು ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬನ ಪಾದ ನೆಕ್ಕಲು ಸಂತ್ರಸ್ತನಿಗೆ ಒತ್ತಡ ಹೇರಲಾಯಿತು, ಆರೋಪಿಗಳೆಲ್ಲ ಮೇಲ್ಜಾತಿಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಪ್ರತಿಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡಿದ್ದು, ಉತ್ತರ ಪ್ರದೇಶ ದಲಿತರಿಗೆ ಸೇಫಲ್ಲ ಎಂದಿವೆ.