ರಿಲೀಸ್ ಆಯ್ತು ದಳಪತಿ ವಿಜಯ್ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ 05-09-2024 4:28PM IST / No Comments / Posted In: Featured News, Live News, Entertainment ದಳಪತಿ ವಿಜಯ್ ನಟನೆಯ ಬಹು ನಿರೀಕ್ಷಿತ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರ ಇಂದು ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಳಪತಿ ವಿಜಯ್ ಅಭಿಮಾನಿಗಳು ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಈ ಚಿತ್ರದಲ್ಲಿ ದಳಪತಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಶಾಂತ್, ಪ್ರಭುದೇವ, ಅಜ್ಮಲ್ ಅಮೀರ್, ಮೋಹನ್, ಜಯರಾಮ್, ಲೈಲಾ, ಮೀನಾಕ್ಷಿ ಚೌಧರಿ, ಯೋಗಿ ಬಾಬು, ವಿಟಿವಿ ಗಣೇಶ್, ಪಾರ್ವತಿ ನಾಯರ್ , ಅರವಿಂದ್ ಆಕಾಶ್, ಅಜಯ್ ರಾಜ್, ಕೋಮಲ್ ಶರ್ಮಾ, ದಿಲೀಪನ್ ಉಳಿದ ಪಾತ್ರವರ್ಗದಲ್ಲಿದ್ದಾರೆ. ಎಜಿಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಕಲ್ಪತಿ ಎಸ್. ಅಘೋರಂ, ಕಲ್ಪಾಟಿ ಎಸ್. ಗಣೇಶ್, ಕಲ್ಪಾಟಿ ಎಸ್.ಸುರೇಶ್ ನಿರ್ಮಾಣ ಮಾಡಿದ್ದಾರೆ. ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆ ನೀಡಿದ್ದು, ವೆಂಕಟ್ ರಾಜನ್ ಸಂಕಲನ, ವೆಂಕಟ್ ಪ್ರಭು ಸಂಭಾಷಣೆ, ಹಾಗೂ ಸಿದ್ದಾರ್ಥ ನ್ಯೂನಿ ಛಾಯಾಗ್ರಾಣವಿದೆ. #GOAT GRAND RELEASE TODAY 🤩 A @vp_offl Hero#TheGreatestOfAllTime Telugu release by @MythriRelease ❤🔥#ThalapathyIsTheGOAT@actorvijay @thisisysr @meenakshiioffl @Ags_production @MythriOfficial #TeluguFilmNagar pic.twitter.com/kgQZ5Q2K8B — Telugu FilmNagar (@telugufilmnagar) September 5, 2024