ನಡಿಗೆ ನಿಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ವಾಕಿಂಗ್ ನಿಮ್ಮನ್ನು ಖುಷಿಯಾಗಿಡುತ್ತೆ. ಯಾರು ನಡೆದಾಡಿಕೊಂಡು, ಓಡಾಡಿಕೊಂಡಿರ್ತಾರೋ ಅವರು ಖುಷಿಯಾಗಿರ್ತಾರೆ ಅನ್ನೋದು ಸಂಶೋಧನೆಯಲ್ಲೇ ದೃಢಪಟ್ಟಿದೆ. ದಿನವಿಡೀ ಚಟುವಟಿಕೆಯಿಂದ ಓಡಾಡಿಕೊಂಡಿರುವವರು ಕುಳಿತು ಕೆಲಸ ಮಾಡುವವರಿಗಿಂತ ಹೆಚ್ಚು ಸಂತೋಷವಾಗಿರುತ್ತಾರೆ.
ಒಂದೇ ಬಾರಿ ಕಿಲೋಮೀಟರ್ ಗಟ್ಟಲೆ ದೂರ ನಡೆಯಬೇಕೆಂದೇನಿಲ್ಲ. ಅಲ್ಲಲ್ಲಿ ನಿಂತು ನಿಂತು ನಡೆಯಬಹುದು. ಆದ್ರೆ ವಾಕಿಂಗ್ ಮಾಡೋದ್ರಿಂದ ಎಲ್ಲಾ ಬೇಸರ, ಚಿಂತೆ ದೂರವಾಗುತ್ತದೆ. ಯಾರು ಹೆಚ್ಚು ನಡೆದಾಡಿದ್ದಾರೋ ಅವರು ಹೆಚ್ಚು ಸಂತೋಷವಾಗಿರೋದು ದೃಢಪಟ್ಟಿದೆ.
ಶಾರೀರಿಕವಾಗಿ ನೀವು ಆ್ಯಕ್ಟಿವ್ ಆಗಿದ್ದಷ್ಟು ಮಾನಸಿಕವಾಗಿಯೂ ಆನಂದವಾಗಿ ಇರುತ್ತೀರಾ. ಯಾರು ಕಡಿಮೆ ನಡೆದಿದ್ದಾರೋ ಅವರು ಅಸಂತುಷ್ಟರಾಗಿ ಕಂಡುಬಂದಿದ್ದಾರೆ. ಶಾರೀರಿಕವಾಗಿ ಚಟುವಟಿಕೆಯಿಂದಿರುವವರು ಧನಾತ್ಮಕವಾಗಿ ಆಲೋಚಿಸುತ್ತಾರೆ. ಅವರಿಗೆ ಚಿಂತೆ ಮತ್ತು ಖಿನ್ನತೆ ಹೆಚ್ಚಾಗಿ ಕಾಡುವುದಿಲ್ಲ. ಹಾಗಾಗಿ ಖುಷಿಯಾಗಿರಬೇಕು ಅಂದ್ರೆ ನೀವು ಕೂಡ ಓಡಾಡುತ್ತಿರಿ.