alex Certify ಲೈಂಗಿಕ ಜೀವನಕ್ಕೆ ಅಪಾಯಕಾರಿ ಪ್ರತಿದಿನ ಬಳಸುವ ʼಸಾಬೂನುʼ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಜೀವನಕ್ಕೆ ಅಪಾಯಕಾರಿ ಪ್ರತಿದಿನ ಬಳಸುವ ʼಸಾಬೂನುʼ…..!

ಹಿಂದಿನ ಕಾಲದಲ್ಲಿ ಸಾಬೂನು ಬಳಕೆಯಲ್ಲಿರಲಿಲ್ಲ. ಜನರು ಚರ್ಮವನ್ನು ಸ್ವಚ್ಛಗೊಳಿಸಿಕೊಳ್ಳಲು ಕಡಲೆ ಹಿಟ್ಟು, ಔಷಧಿ ಎಲೆಗಳು, ಔಷಧಿ ಗಿಡದ ಬೀಜಗಳನ್ನು ಪುಡಿ ಮಾಡಿ ಬಳಸ್ತಾ ಇದ್ದರು. ಆದ್ರೆ ಈಗ ಕಾಲ ಬದಲಾಗಿದೆ. ಆಧುನಿಕ ಯುಗದಲ್ಲಿ ತರಹೇವಾರಿ ಸಾಬೂನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸುವಾಸನೆಯುಳ್ಳ, ಚರ್ಮದ ಧೂಳನ್ನು ಸ್ವಚ್ಛಗೊಳಿಸುವ ಸಾಬೂನುಗಳು ನಮಗೆ ಗೊತ್ತಿಲ್ಲದೆ ನಮ್ಮ ಆರೋಗ್ಯವನ್ನು ಹದಗೆಡಿಸುತ್ತಿವೆ.

ಈ ಸಾಬೂನುಗಳಲ್ಲಿರುವ ರಾಸಾಯನಿಕಗಳು ಹಾರ್ಮೊನ್ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿವೆ. Triclocarban ಹಾಗೂ triclosan ರಾಸಾಯನಿಕಗಳನ್ನು ಬಳಸಿ ಸಾಬೂನುಗಳನ್ನು ತಯಾರಿಸಲಾಗ್ತಾ ಇದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಒಂದು ರೀತಿಯ ರಾಸಾಯನಿಕವಾಗಿರುವ ಸರ್ಫ್ಯಾಕ್ಟಂಟನ್, ಸೋಪಿನೊಂದಿಗೆ ನೀರು ಮಿಶ್ರವಾಗಲು ನೆರವಾಗುತ್ತದೆ. ಚರ್ಮದ ಮೇಲಿನ ಧೂಳನ್ನು ಇದು ಹೋಗಲಾಡಿಸುತ್ತದೆ. ಆದ್ರೆ ಅನೇಕ ಆರೋಗ್ಯ ಸಮಸ್ಯೆಗಳು ಇದರಿಂದ ಕಾಣಿಸಿಕೊಳ್ಳುತ್ತಿವೆ. ಪ್ರತಿದಿನ ಬಳಸುವ ಸಾಬೂನಿನಲ್ಲಿ ಸುಗಂಧ, ಡಿಟರ್ಜೆಂಟ್ ಮತ್ತು ಕೆಲವೊಂದು ರಾಸಾಯನಿಕ ಅಂಶಗಳಿರುತ್ತವೆ. ಇದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ ನಿಜ. ಜೊತೆಗೆ ದೇಹದಲ್ಲಿರುವ ತೇವಾಂಶವನ್ನು ಹೀರಿಬಿಡುತ್ತದೆ. ಇದರಿಂದ ದೇಹದಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಕೂಡ ಸಾಯಲ್ಪಡುತ್ತವೆ. ಇಷ್ಟೇ ಅಲ್ಲ ಬ್ಯಾಕ್ಟೀರಿಯಾ ವಿರೋಧಿ ಸಾಬೂನುಗಳು ಲೈಂಗಿಕ ಕ್ರಿಯೆಯ ಮೇಲೆಯೂ ದುಷ್ಪರಿಣಾಮ ಬೀರುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...