ಮೇಷ : ಈ ದಿನವು ನಿಮಗೆ ಅದೃಷ್ಟವನ್ನು ತರಲಿದೆ. ಕುಟುಂಬದಲ್ಲಿ ಸಂತಸದ ಘಟನೆಯೊಂದಕ್ಕೆ ನೀವು ಸಾಕ್ಷಿಯಾಗಲಿದ್ದೀರಿ. ಕೆಲಸದ ಒತ್ತಡದಿಂದ ತತ್ತರಿಸಿದ್ದ ನೀವು ಇಂದು ವಿಶ್ರಾಂತಿ ಪಡೆಯಲಿದ್ದೀರಿ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ.
ವೃಷಭ : ನಿಮ್ಮಿಂದ ಸಾಲ ಪಡೆದ ಸ್ನೇಹಿತ ಬಹಳ ದಿನದ ಬಳಿಕ ಇಂದು ಹಣವನ್ನು ವಾಪಾಸ್ ಮಾಡಲಿದ್ದಾರೆ. ಇದರಿಂದ ನಿಮಗೆ ನಿರಾಳತೆಯ ಅನುಭವವಾಗಲಿದೆ. ಮಕ್ಕಳು ಶೈಕ್ಷಣಿಕ ಜೀವನದಲ್ಲಿ ಮಹತ್ವದ ಸಾಧನೆಯನ್ನು ಮಾಡಲಿದ್ದಾರೆ.
ಮಿಥುನ : ವ್ಯವಹಾರಗಳಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡವರಿಗೆ ಇಂದು ಶುಭ ದಿನವಿದೆ. ಗುರು – ಹಿರಿಯರ ಮಾರ್ಗದರ್ಶನದಂತೆ ಸೂಕ್ತ ಹೆಜ್ಜೆಯನ್ನು ಇಡಲಿದ್ದೀರಿ. ವೈವಾಹಿಕ ಸಂಬಧಕ್ಕೆ ಅರಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ.
ಕಟಕ : ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಮನೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿಯು ಇದು ಸ್ಫೋಟವಾಗಬಹುದು. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ದೂರ ಪ್ರಯಾಣಕ್ಕೆ ಇದು ಸೂಕ್ತ ದಿನವಲ್ಲ.
ಸಿಂಹ : ಕುಟುಂಬಕ್ಕೆ ಒಳಿತಾಗುವಂತಹ ಕೆಲಸವೊಂದನ್ನು ನೀವಿಂದು ಮಾಡಲಿದ್ದೀರಿ. ಇದರಿಂದ ಕುಟುಂಬಸ್ಥರು ನಿಮ್ಮ ಮೇಲೆ ಹೆಮ್ಮೆ ಪಡಲಿದ್ದಾರೆ. ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.
ಕನ್ಯಾ : ಕೋರ್ಟ್ – ಕಚೇರಿ ಅಲೆದು ಸುಸ್ತಾಗಿರುವ ನೀವು ಇಂದು ಪ್ರಭಾವಿ ವ್ಯಕ್ತಿಗಳ ಸಹಾಯ ಪಡೆಯುವ ಬಗ್ಗೆ ಯೋಚನೆ ಮಾಡಲಿದ್ದೀರಿ. ಎಷ್ಟೇ ಮಾಡಿದರೂ ಹಣ ಉಳಿಯುತ್ತಿಲ್ಲ ಎಂಬ ಕೊರಗು ನಿಮ್ಮದು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕದೇ ಬೇರೆ ದಾರಿಯಿಲ್ಲ.
ತುಲಾ : ಸಣ್ಣ ವಿಚಾರಕ್ಕೆ ಶುರುವಾದ ಕಿತ್ತಾಟವು ದಾಂಪತ್ಯ ಜೀವನದಲ್ಲಿ ದೊಡ್ಡ ಕಂದಕವನ್ನೇ ಸೃಷ್ಟಿಸುವ ಸಾಧ್ಯತೆ ಇದೆ. ಮಕ್ಕಳ ಓದಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿದ್ದೀರಿ. ಉತ್ತಮ ಉದ್ಯೋಗದ ಹುಡುಕಾಟದಲ್ಲಿರುವ ನೀವು ಇಂದು ಶುಭಸುದ್ದಿಯನ್ನು ಕೇಳುವ ಸಾಧ್ಯತೆ ಇದೆ.
ವೃಶ್ಚಿಕ : ಬಹಳ ದಿನಗಳಿಂದ ಮುಚ್ಚಿಟ್ಟಿದ್ದ ವಿಷಯವೊಂದನ್ನು ಇಂದು ಸಂಗಾತಿಯೊಡನೆ ಹಂಚಿಕೊಳ್ಳಲಿದ್ದೀರಿ. ವೃತ್ತಿ ಜೀವನದಲ್ಲಿ ನಿಮಗೆ ಮೂಡಿರುವ ಬೇಸರವು ಹೊಸ ಕೆಲಸ ಹುಡುಕುವಂತೆ ಮಾಡಲಿದೆ. ಸ್ತ್ರೀಯರಿಗೆ ಅದೃಷ್ಟ ಕಾದಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ.
ಧನು : ಟ್ಯಾಕ್ಸಿ ಉದ್ಯಮದಲ್ಲಿ ಇರುವವರಿಗೆ ಇಂದು ಶುಭಯೋಗವಿದೆ. ಬಹಳ ದಿನಗಳ ಬಳಿಕ ಸ್ನೇಹಿತರು ನಿಮ್ಮನ್ನು ಭೇಟಿ ಮಾಡಲಿದ್ದಾರೆ. ಪ್ರೇಮ ಜೀವನದಲ್ಲಿ ಕೆಲ ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ. ಗರ್ಭಿಣಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಮಕರ : ಸ್ನೇಹಿತರನ್ನು ಕಷ್ಟದಿಂದ ಪಾರು ಮಾಡಲು ಹೋಗಿ ನೀವೇ ದೊಡ್ಡ ಜಾಲದ ಒಳಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರ ವಹಿಸಿ. ಅತಿಯಾಗಿ ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ. ಹೀಗಾಗಿ ಪ್ರಯಾಣಕ್ಕೆ ಈ ದಿನ ಸೂಕ್ತವಾಗಿಲ್ಲ.
ಕುಂಭ : ಪ್ರತಿಷ್ಠಿತ ವ್ಯಕ್ತಿಯಾಗಿರುವ ನಿಮಗೆ ಮುಖಭಂಗವನ್ನುಂಟು ಮಾಡುವ ಕೆಲಸವನ್ನು ನಿಮ್ಮ ಮಕ್ಕಳು ಮಾಡಲಿದ್ದಾರೆ. ಇದರಿಂದ ನೀವಿಂದು ಮನಸ್ಸಿಗೆ ನೋವು ಮಾಡಿಕೊಳ್ಳಲಿದ್ದೀರಿ. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುವ ಬಗ್ಗೆ ಸಂಗಾತಿಯೊಡನೆ ಚರ್ಚಿಸಲಿದ್ದೀರಿ.
ಮೀನ : ಮನೆಯ ಕಿರಿಯ ಸದಸ್ಯ ಕುಟುಂಬದ ಕೀರ್ತಿ ಪತಾಕೆಯನ್ನು ಹಾರಿಸುವಂತಹ ಸಾಧನೆಯನ್ನು ಮಾಡಲಿದ್ದಾರೆ. ಇದರಿಂದ ಇಡೀ ಕುಟುಂಬವೇ ಇಂದು ಸಂತಸದ ಕಡಲಿನಲ್ಲಿ ತೇಲಲಿದೆ. ಉದ್ಯಮದಲ್ಲಿಂದು ಅತೀವ ಲಾಭವಿದೆ. ಶುಭ ಸುದ್ದಿಯೊಂದಿಗೆ ನಿಮ್ಮ ಈ ದಿನ ಆರಂಭಗೊಳ್ಳಲಿದೆ.