ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳಿಗೆ ಪ್ರತಿ ನಿತ್ಯದ ಆಹಾರ ಭತ್ಯೆಯನ್ನು 75 ರೂ.ನಿಂದ 150 ರೂಪಾಯಿಗೆ ಹೆಚ್ಚಳ ಮಾಡಿ ರಾಜ್ಯ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಶಿಫಾರಸು ಅನ್ವಯ ಈ ಮೊದಲು ಕಸ್ಟಡಿಯಲ್ಲಿದ್ದ ಆರೋಪಿಗಳಿಗೆ ನಿತ್ಯ ಆಹಾರ ಭತ್ಯೆಯಾಗಿ 75 ರೂ. ವ್ಯಯ ಮಾಡಲಾಗುತ್ತಿತ್ತು. ಇತ್ತೀಚಿಗೆ ತರಕಾರಿ ಹಾಗೂ ದಿನಸಿ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಭತ್ಯೆ ಹೆಚ್ಚಳಕ್ಕೆ ಪೊಲೀಸ್ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿತ್ತು.
ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಪಡೆದಾಗ ಆತನಿಗೆ ಊಟ ತಿಂಡಿ ನೀಡಬೇಕಾಗುತ್ತದೆ. ಇದಕ್ಕಾಗಿ ಪೊಲೀಸ್ ಇಲಾಖೆ 75 ರೂ. ಆಹಾರ ಭತ್ಯೆ ನೀಡುತ್ತಿತ್ತು. ಕೆಲವೊಮ್ಮೆ, ಪೊಲೀಸರೇ ಕೈಯಿಂದ ಹಣ ಹಾಕುವಂತಾಗಿತ್ತು. ಇದೀಗ ಅಪರಾಧ ಪ್ರಕರಣಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಆಪಾದಿತರಿಗೆ ಪ್ರತಿದಿನ ನೀಡುವ ಆಹಾರ ಭತ್ಯೆಯನ್ನು 150 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.