ಮೇಷ : ಸಾಂಸಾರಿಕ ಜೀವನದಲ್ಲಿ ಬಹುದಿನಗಳಿಂದ ಇದ್ದ ಕಿರಿಕಿರಿ ದೂರಾಗಿ ನೆಮ್ಮದಿ ನೆಲೆಸಲಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಫಲ ಸಿಗುವ ಕಾಲ ಕೊನೆಗೂ ಕೂಡಿ ಬರಲಿದೆ. ವ್ಯಾಪಾರಿಗಳಿಗೆ ದಿನದ ಕೊನೆಯಲ್ಲಿ ಲಾಭ ಸಿಗಲಿದೆ.
ವೃಷಭ : ದೂರ ಪ್ರಯಾಣದ ಕೆಲಸಗಳನ್ನ ಮುಂದೂಡಲಿದ್ದೀರಿ. ಇದಕ್ಕೆ ನಿಮ್ಮ ಆರೋಗ್ಯ ಸಮಸ್ಯೆಯೇ ಕಾರಣ. ಹೀಗಾಗಿ ಆರೋಗ್ಯದ ಕಡೆ ಜಾಗ್ರತೆ ವಹಿಸಿ. ಸಾರ್ವಜನಿಕ ರಂಗದಲ್ಲಿ ರಾಜಕಾರಣಿಗಳಿಗೆ ಉತ್ತಮ ಪ್ರಶಂಸೆ ಸಿಗಲಿದೆ.
ಮಿಥುನ : ಕಚೇರಿ ಕೆಲಸದಲ್ಲಿ ನೆಮ್ಮದಿ ಇದೆ. ಕೃಷಿ ರಂಗದ ಕಾರ್ಯಗಳೂ ಸಹ ಯಾವುದೇ ಕಿರಿಕಿರಿ ಇಲ್ಲದೇ ಸಾಂಘವಾಗಿ ನೆರವೇರಲಿದೆ. ನಿರುದ್ಯೋಗಿಗಳಿಗೆ ಕಷ್ಟ ತಪ್ಪಿದ್ದಲ್ಲ. ಕುಲದೇವತೆಯನ್ನ ಆರಾಧಿಸಿ.
ಕಟಕ : ವಿದ್ಯಾರ್ಥಿಗಳಿಗೆ ಹಿನ್ನಡೆ ಉಂಟಾಗಲಿದೆ. ಮದುವೆಗಾಗಿ ಅರಸುತ್ತಿರುವವರಿಗೆ ಉತ್ತಮ ಸಂಬಂಧ ಕೂಡಿ ಬರಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವ ಮುನ್ಸೂಚನೆ ಸಿಗಲಿದೆ. ಮೇಲಾಧಿಕಾರಿಗಳಿಂದ ಪ್ರಶಂಸೆ ಗಳಿಸಲಿದ್ದೀರಿ.
ಸಿಂಹ : ಪಿತ್ರಾರ್ಜಿತ ಆಸ್ತಿಯಲ್ಲಿ ಇದ್ದ ಕಿರಿಕಿರಿ ಹಾಗೆಯೇ ಮುಂದುವರಿಯಲಿದೆ. ಜವಳಿ ಉದ್ಯಮಿಗಳಿಗೆ ಇಂದು ಲಾಭ ಕಾದಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಪೋಷಕರ ಆರೋಗ್ಯದ ಕಡೆಗೆ ಜಾಗ್ರತೆ ವಹಿಸಿ.
ಕನ್ಯಾ : ಕೆಲಸದ ಸ್ಥಳವನ್ನ ಬದಲಾವಣೆ ಮಾಡುವ ಸಾಧ್ಯತೆ ಇದೆ. ಮನೆಯಲ್ಲಿನ ಮನಸ್ತಾಪಗಳಿಗೆ ನೀವೇ ಕಾರಣ ಆಗಬಹುದು. ನಿಮ್ಮ ಮೇಲೆ ಅಪವಾದ ಎದುರಾಗುವ ಸಾಧ್ಯತೆ ಇದೆ. ಪೋಷಕರೊಂದಿಗೆ ಅನಗತ್ಯ ವಾದ ಬೇಡ.
ತುಲಾ : ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಸ್ಥಗಿತಗೊಳ್ಳಲಿದೆ. ಕುಟುಂಬದವರಲ್ಲಿ ಆತಂಕದ ವಾತಾವರಣ ಉಂಟಾಗಲಿದೆ. ವಿದ್ಯಾರ್ಥಿಗಳು ಪ್ರಯತ್ನ ಮುಂದುವರಿಸಿ. ಗುರು ರಾಘವೇಂದ್ರನ ಧ್ಯಾನ ಮಾಡಿ.
ವೃಶ್ಚಿಕ : ವ್ಯವಹಾರದಲ್ಲಿ ಲಾಭ ನಿಮ್ಮದಾದರೂ ಸಹ ಖರ್ಚು ವೆಚ್ಚ ಕೂಡ ಹೆಚ್ಚಾಗಲಿದೆ. ಸಂಗಾತಿಯ ಅಭಿಪ್ರಾಯಗಳಿಗೆ ಆದ್ಯತೆ ನೀಡಿ. ನವದಂಪತಿಗೆ ಸಂತಾನ ಭಾಗ್ಯವಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ.
ಧನು : ಸ್ನೇಹಿತರ ಇಷ್ಟಕ್ಕೆ ವಿರುದ್ಧವಾಗಿ ನಡೆಯಬೇಕಾದ ಕಾಲ ಬರಬಹುದು. ಮೇಲಾಧಿಕಾರಿಗಳಿಂದ ಪ್ರಶಂಸೆ ಗಳಿಸಲಿದ್ದೀರಿ. ವೃತ್ತಿರಂಗದಲ್ಲಿ ಹೊಸ ಜವಾಬ್ದಾರಿಯೊಂದು ನಿಮ್ಮ ಹೆಗಲೇರಲಿದೆ. ಜವಳಿ ಉದ್ಯಮದವರಿಗೆ ಲಾಭ ಕಾದಿದೆ.
ಮಕರ : ವೈದ್ಯಕೀಯ ವೃತ್ತಿಯವರಿಗೆ ಇದು ಒತ್ತಡದ ದಿನವಾಗಿರಲಿದೆ. ಕೋರ್ಟ್, ಕಚೇರಿ ಕೆಲಸದಲ್ಲಿ ನಿಮಗೆ ಜಯ ಪ್ರಾಪ್ತಿಯಾಗಲಿದೆ. ಸರ್ಕಾರಿ ಕೆಲಸಗಳು ಸಾಂಘವಾಗಿ ನೆರವೇರಲಿದೆ. ವೈಯಕ್ತಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ.
ಕುಂಭ : ಧಾರ್ಮಿಕ ವಿಚಾರಗಳತ್ತ ಗಮನ ಹರಿಸುತ್ತೀರಿ. ಲೌಕಿಕ ವಿಚಾರಗಳ ಮೇಲಿದ್ದ ಆಸಕ್ತಿ ಕ್ರಮೇಣವಾಗಿ ಕಡಿಮೆ ಆಗಲಿದೆ. ಕುಟುಂಬ ಸದಸ್ಯರ ಜೊತೆ ಅನಗತ್ಯ ವಾದ ಬೇಡ.
ಮೀನ : ಎಂತಹ ಕಠಿಣ ಸಂದರ್ಭದಲ್ಲೂ ಸಹನೆ ಕಾಯ್ದುಕೊಳ್ಳಿ. ವೃತ್ತಿರಂಗದಲ್ಲಿ ಕೊಂಚ ಕಿರಿಕಿರಿ ಎದುರಾಗಲಿದೆ. ದಾಂಪತ್ಯ ಜೀವನದಲ್ಲಿ ಸಮಸ್ಯೆ ತೋರಿಬಂದರೂ ನಿಮ್ಮ ತಾಳ್ಮೆಯಿಂದ ಸವಾಲುಗಳನ್ನ ಎದುರಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಇದೆ.