ಮಕ್ಕಳನ್ನು ಕಾಪಾಡಲು ಅಪ್ಪ ಯಾವ ಮಟ್ಟದವರೆಗೂ ಹೋಗಬಲ್ಲ ಎಂದು ತೋರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್ ಆಗಿದೆ.
ಆಂಡ್ರ‍್ಯೂ ರೀಸ್ ಹೆಸರಿನ 38 ವರ್ಷದ ವ್ಯಕ್ತಿಯೊಬ್ಬರು ಅಮ್ಯೂಸ್ಮೆಂಟ್ ಪಾರ್ಕಿನ ವಾಟರ್‌ಸ್ಲೈಡ್‌ನಲ್ಲಿ ಸಿಲುಕಿದ್ದ ಸಿಯೆನಾ ಹೆಸರಿನ ತಮ್ಮ ಆರು ವರ್ಷದ ಮಗಳನ್ನು ಹೀರೋ ರೀತಿಯ ಸಾಹಸಗೈದು ಕಾಪಾಡಿದ್ದಾರೆ.
ಪುಟ್ಟ ದೋಣಿಯೊಂದರಲ್ಲಿ ವಾಟರ್‌ಸ್ಲೈಡ್‌ನಲ್ಲಿ ಜಾರಿ ಹೋಗುತ್ತಿದ್ದ ಸಂದರ್ಭದಲ್ಲಿ ಮಧ್ಯೆ ಸಿಲುಕಿಕೊಂಡು ಆತಂಕಿತಳಾಗಿದ್ದ ಮಗಳ ರಕ್ಷಣೆಗೆ ಅಮ್ಯೂಸ್ಮೆಂಟ್ ಪಾರ್ಕ್ ಸಿಬ್ಬಂದಿ ಧಾವಿಸುವುದು ತಡವಾದ ಕಾರಣ ತಾನೇ ಮಗಳ ರಕ್ಷಣೆಗೆ ಇಳಿದಿದ್ದಾರೆ ಆಂಡ್ರ‍್ಯೂ.
ಸ್ಲೈಡ್ ಅನ್ನು ಖುದ್ದಾಗಿ ಏರಿ ಹೊರಟ ಆಂಡ್ರ‍್ಯೂ ತಮ್ಮ ಮಗಳ ರಕ್ಷಣೆ ಮಾಡುವುದನ್ನು ಅಲ್ಲಿಯೇ ಇದ್ದ ಅವರ ಪತ್ನಿ ಎಮ್ಮಾ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆಂಡ್ರ‍್ಯೂರನ್ನು ತಕ್ಷಣ ಕೂಡಿಕೊಂಡ ರಕ್ಷಣಾ ತಂಡ ಸಿಯೆನಾಳನ್ನು ರಕ್ಷಿಸಿದೆ.
ಇಂಗ್ಲೆಂಡ್‌ನ ವಾರ‍್ರಿಂಗ್ಟನ್‌ನಲ್ಲಿರುವ ಗಲ್ಲಿವರ್ಸ್ ವರ್ಲ್ಡ್ ಹೆಸರಿನ ಈ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ನೆರೆದಿದ್ದವರೆಲ್ಲ ಈ ಹೀರೋ ಅಪ್ಪನ ಸಾಹಸವನ್ನು ಕಂಡು ಆತನನ್ನು ಮೆಚ್ಚಿ ಕೊಂಡಾಡಿದ್ದಾರೆ.