
ದೆಹಲಿಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಈ ಹಿಂದೆ ಮಹಿಳೆಯ ವಿಡಿಯೋವನ್ನು ಹಂಚಿಕೊಂಡಿದ್ದರು. ಪ್ರತಿಯೊಬ್ಬರೂ ಅವರ ವಸ್ತುಗಳನ್ನು ಖರೀದಿಸುವಂತೆ ಮನವಿ ಮಾಡಿದ್ದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ, ಹೇಮಕುಂಟ್ ಫೌಂಡೇಶನ್ ದಾದಿಗಾಗಿ ನಿರಂತರ ಹುಡುಕಾಟವನ್ನು ಪ್ರಾರಂಭಿಸಿತು. ಮುಂಬೈನ ಸ್ಥಳೀಯ ರೈಲುಗಳಲ್ಲಿ 48 ಗಂಟೆಗಳ ಹುಡುಕಾಟದ ನಂತರ ಅಂತಿಮವಾಗಿ ಆಕೆಯನ್ನು ಕಂಡುಕೊಂಡರು ಎಂದು ಸಂಸ್ಥೆಯ ನಿರ್ದೇಶಕ ಹರ್ತೀರತ್ ಸಿಂಗ್ ಅಹ್ಲುವಾಲಿಯಾ ಹಂಚಿಕೊಂಡಿದ್ದಾರೆ.
ಆದರೆ, ಈ ವೇಳೆ ಆಕೆ ಹಣಕಾಸಿನ ಸಹಾಯವನ್ನು ನಿರಾಕರಿಸಿದ್ರು. ಬದಲಿಗೆ, ಅವರು ಮಾರಾಟ ಮಾಡುತ್ತಿದ್ದ ಎಲ್ಲಾ ಚಾಕೊಲೇಟ್ಗಳನ್ನು ಖರೀದಿಸಿದರು. ಆಕೆಯೊಂದಿಗಿನ ಫೋಟೋವನ್ನು ಶೀರ್ಷಿಕೆ ಸಹಿತ ಅಹ್ಲುವಾಲಿಯಾ ಟ್ವೀಟ್ ಮಾಡಿದ್ದಾರೆ.