ಸೋಮವಾರದಂದು ಮುಂಬೈನ ಪಂಚತಾರ ಹೋಟೆಲ್ ನಲ್ಲಿ 2023 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಕನ್ನಡಿಗ ರಿಷಬ್ ಶೆಟ್ಟಿ ‘ಕಾಂತಾರ’ ದಲ್ಲಿನ ನಟನೆಗಾಗಿ ‘ಅತ್ಯುತ್ತಮ ಭರವಸೆಯ ನಟ’ ಪ್ರಶಸ್ತಿ ಪಡೆದಿದ್ದಾರೆ.
ಅತ್ಯುತ್ತಮ ಚಿತ್ರ ಪ್ರಶಸ್ತಿ ‘ದಿ ಕಾಶ್ಮೀರ್ ಫೈಲ್ಸ್’ ಪಾಲಾಗಿದ್ದರೆ, ಬ್ರಹ್ಮಾಸ್ತ್ರ ಚಿತ್ರದಲ್ಲಿನ ನಟನೆಗಾಗಿ ರಣಬೀರ್ ಕಪೂರ್, ಉತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಗಂಗೂಬಾಯ್ ಕಾಥಿಯವಾಡಿ ಚಿತ್ರದ ಅಭಿನಯಕ್ಕಾಗಿ ಅಲಿಯಾ ಭಟ್ ಉತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.
ಬೆಸ್ಟ್ ಫಿಲ್ಮ್ : ದಿ ಕಾಶ್ಮೀರ್ ಫೈಲ್ಸ್
ಬೆಸ್ಟ್ ಡೈರೆಕ್ಟರ್: ಆರ್. ಬಾಲ್ಕಿ (ಚುಪ್ ರಿವೆಂಜ್ ಆಫ್ ದಿ ಆರ್ಟಿಸ್ಟ್)
ಅತ್ಯುತ್ತಮ ನಟ: ರಣಬೀರ್ ಕಪೂರ್ (ಬ್ರಹ್ಮಾಸ್ತ್ರ ಪಾರ್ಟ್ 1)
ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯ್ ಕಾಥಿಯವಾಡಿ)
ಅತ್ಯುತ್ತಮ ಭರವಸೆಯ ನಟ: ರಿಷಬ್ ಶೆಟ್ಟಿ (ಕಾಂತಾರ)
ಚಿತ್ರರಂಗದಲ್ಲಿನ ಗಣನೀಯ ಸೇವೆ: ರೇಖಾ
ಬೆಸ್ಟ್ ವೆಬ್ ಸೀರೀಸ್: ರುದ್ರ ದ ಎಡ್ಜ್ ಆಫ್ ಡಾರ್ಕ್ನೆಸ್
ಕ್ರಿಟಿಕ್ಸ್ ಬೆಸ್ಟ್ ಆಕ್ಟರ್: ವರುಣ್ ಧವನ್ (ಭೇಡಿಯ)
ಫಿಲ್ಮ್ ಆಫ್ ದಿ ಇಯರ್: RRR
ಟೆಲಿವಿಷನ್ ಸೀರೀಸ್ ಆಫ್ ದಿ ಇಯರ್: ಅನುಪಮ
ಮೋಸ್ಟ್ ವರ್ಸಟೈಲ್ ಆಕ್ಟರ್ ಆಫ್ ದಿ ಇಯರ್: ಅನುಪಮ್ ಖೇರ್ (ದಿ ಕಾಶ್ಮೀರ್ ಫೈಲ್ಸ್)
ಬೆಸ್ಟ್ ಆಕ್ಟರ್ ಇನ್ ಟೆಲಿವಿಷನ್ ಸೀರೀಸ್: ಝೈನ್ ಇಮಾಮ್ (ಫನಾ- ಇಶ್ಕ್ ಮೇ ಮಾರ್ಜನ್)
ಬೆಸ್ಟ್ ಮೇಲ್ ಸಿಂಗರ್: ಸಚೆತ್ ಟಂಡನ್ (ಮೈಯ ಮೈನು)
ಬೆಸ್ಟ್ ಫೀಮೇಲ್ ಸಿಂಗರ್: ನೀತಿ ಮೋಹನ್ (ಮೇರಿ ಜಾನ್)
ಬೆಸ್ಟ್ ಸಿನಿಮಟೊಗ್ರಾಫರ್: ಪಿ.ಎಸ್. ವಿನೋದ್ (ವಿಕ್ರಂ ವೇದ)
https://www.youtube.com/watch?v=D2mIq2co-hQ