ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಕ್ಲಿಪ್‌ನಲ್ಲಿ ನವಜಾತ ಶಿಶು ಗಿಟಾರ್ ಮೇಲೆ ವಿಶ್ರಮಿಸುತ್ತಿರುವುದನ್ನು ಕಾಣಬಹುದು. ತಂದೆಯು ಭಾವಪೂರ್ಣ ಸಂಗೀತದ ನೋಟ್ಸ್ ನುಡಿಸುವಾಗ, ಮಗುವಿನ ಮುಖವು ಅರಳುತ್ತದೆ. ನಡು ನಡುವೆ ಒಂದು ಸಣ್ಣ ನಗು ಹೊರಸೂಸುತ್ತದೆ. ಆ ಸ್ಮೈಲ್ ಎಂತವರ ಹೃದಯವನ್ನು ಸಹ ಕರಗಿಸುವುದು ಖಚಿತ.
ಇದು ತಂದೆ-ಮಕ್ಕಳ ಬಾಂಧವ್ಯದ ಸುಂದರ ಪ್ರದರ್ಶನವಾಗಿ ಕಾಣಿಸುತ್ತದೆ. ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಈ ಕ್ಲಿಪ್‌ನಿಂದ ವಿಸ್ಮಯಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ಹಂಚಿಕೊಂಡ ನಂತರ ಕ್ಲಿಪ್ ಸುಮಾರು 2 ಮಿಲಿಯನ್ ವೀಕ್ಷಣೆ, ಸಾವಿರಾರು ಲೈಕ್ ಪಡೆದುಕೊಂಡಿತು. ಡ್ಯಾಡ್ ಆಫ್ ದಿ ಇಯರ್ ಎಂದು ಕಾಮೆಂಟ್ ಕೂಡ ಬಂದಿದೆ.
https://twitter.com/Thund3rB0lt/status/1595447325660704769?ref_src=twsrc%5Etfw%7Ctwcamp%5Etweetembed%7Ctwterm%5E1595447325660704769%7Ctwgr%5Eea8fb00d2ce36945d4f085bd387fb0dfc91253e0%7Ctwcon%5Es1_&ref_url=https%3A%2F%2Fwww.news18.com%2Fbuzz%2Fdad-of-the-year-video-of-man-putting-baby-to-sleep-by-playing-guitar-is-perfect-timeline-cleanser-6469075.html