ಮಗುವಿಗೆ ನಾಮಕರಣ ಮಾಡುವ ಮುನ್ನ ಒಂದೊಳ್ಳೆ ಹೆಸರನ್ನ ಹುಡುಕಾಡೋಕೆ ಪೋಷಕರು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ವಿಶಿಷ್ಟವಾದ, ವಿಶೇಷವಾದ ಹಾಗೂ ಅರ್ಥಗರ್ಭಿತವಾದ ಹೆಸರನ್ನ ಹುಡುಕೋದು ಒಂದು ಸವಾಲಿನ ಕೆಲಸವೇ ಸರಿ. ಆದರೆ ಕೆಲವರು ಮಾತ್ರ ತಮ್ಮ ಮಕ್ಕಳಿಗೆ ಹೆಸರಿಡುವ ವೇಳೆ ವಿಚಿತ್ರ ಪ್ರಸಂಗವನ್ನ ಎದುರಿಸುದುವುದುಂಟು.
ಕೆಂಟುಕಿಯ ಯುವತಿಯೊಬ್ಬರು ತಮ್ಮ ತಂದೆ ತಮಗೆ ಏಕೆ ಈ ಹೆಸರನ್ನ ಇಟ್ಟರು ಅನ್ನೋದರ ಹಿಂದಿನ ವಿಚಿತ್ರ ಕಾರಣವನ್ನ ಬಹಿರಂಗಪಡಿಸಿದ್ದಾರೆ. ಕ್ರಿಸ್ಟಿನಾ ಎಂಬಾಕೆ ಜನಿಸುವ ಮುನ್ನವೇ ಆಕೆಯ ಪೋಷಕರು ಮಗುವಿನ ಹೆಸರನ್ನ ಯಾರು ಇಡಬೇಕು ಅನ್ನೋದನ್ನ ಮೊದಲೇ ನಿರ್ಧರಿಸಿದ್ದರಂತೆ. ಗಂಡು ಮಗು ಜನಿಸಿದರೆ ತಾಯಿ ಮಗುವಿಗೆ ಹೆಸರಿಡಬೇಕು ಹಾಗೂ ಹೆಣ್ಣು ಮಗು ಜನಿಸಿದ್ರೆ ತಂದೆ ನಾಮಕರಣ ಮಾಡೋದು ಎಂಬ ಒಪ್ಪಂದ ಮಾಡಿಕೊಂಡಿದ್ದರಂತೆ.
ಸಾಮಾನ್ಯವಾಗಿ ಮಗುವಿಗೆ ಹೆಸರಿಡುವಾಗ ಪೋಷಕರು ಹೆಸರಿನ ಹಿಂದಿನ ವಿಶೇಷ ಅರ್ಥಕ್ಕೋ ಇಲ್ಲವೇ ಆ ಹೆಸರಿನ ವಿಶೇಷ ವ್ಯಕ್ತಿಗೋ ಆದ್ಯತೆಯನ್ನ ನೀಡುತ್ತಾರೆ. ಆದರೆ ಕ್ರಿಸ್ಟಿನಾ ವಿಚಾರದಲ್ಲಿ ಮಾತ್ರ ಇದ್ಯಾವುದೂ ನಿಜವಾಗಿಲ್ಲ.
ಭಯೋತ್ಪಾದಕರ ದಾಳಿಯಲ್ಲಿ ಸೇನಾ ನಾಯಕ ಸೇರಿ ಪಾಕಿಸ್ತಾನದ 12 ಯೋಧರ ಸಾವು
ಕ್ರಿಸ್ಟಿನಾ ಸಿ ಸೆಕ್ಷನ್ ಹೆರಿಗೆ ಮೂಲಕ ಜನಿಸಿದ್ದರು. ಹೀಗಾಗಿ ಜನನ ಪ್ರಮಾಣ ಪತ್ರ ಭರ್ತಿ ಮಾಡುವ ವೇಳೆ ಕ್ರಿಸ್ಟಿನಾ ತಾಯಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಒಪ್ಪಂದದ ಪ್ರಕಾರ ಕ್ರಿಸ್ಟಿನಾ ತಂದೆಯೇ ಈ ಹೆಸರನ್ನ ಇಟ್ಟಿದ್ದರು. ಆದರೆ ಈ ಹೆಸರಿನ ಹಿಂದೆ ತಂದೆಯ ಒಂದು ದೊಡ್ಡ ರಹಸ್ಯ ಇದೆ ಅನ್ನೋದು ತಾಯಿಗೆ ತಿಳಿದಿರಲಿಲ್ಲವಂತೆ.
ಕೆಲವು ತಿಂಗಳ ಬಳಿಕ ನನ್ನ ತಾಯಿಗೆ ನನ್ನ ತಂದೆ ಮೋಸ ಮಾಡುತ್ತಿದ್ದಾರೆ ಎಂಬ ವಿಚಾರ ತಿಳಿಯಿತು. ಅವರು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಹೆಸರು ಕೂಡ ಕ್ರಿಸ್ಟಿನಾ ಎಂದಾಗಿತ್ತು. ಮನೆಯಲ್ಲಿ ಈ ಹೆಸರನ್ನ ಹೇಳಿ ಸಿಕ್ಕಿ ಹಾಕಿಕೊಳ್ಳಬಾರದು ಎಂಬ ಕಾರಣಕ್ಕೆ ತನಗೂ ತಂದೆ ಆಕೆಯ ಹೆಸರನ್ನೇ ಇಟ್ಟಿದ್ದರು ಎಂದು ಯುವತಿ ಹೇಳಿದ್ದಾರೆ. ಟಿಕ್ಟಾಕ್ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.