ಅಪಹರಣಕ್ಕೆ ಒಳಗಾದ ಮಗನನ್ನು ಮೋಟಾರ್‌ಸೈಕಲ್‌ನಲ್ಲಿ 24 ವರ್ಷಗಳ ಕಾಲ ಹುಡುಕಾಟ ನಡೆಸಿದ ತಂದೆ ಕೊನೆಗೂ ಮಗನನ್ನು ಕಂಡುಹಿಡಿದಿರುವ ಹೃದಯವಿದ್ರಾವಕ ಘಟನೆ ಚೀನಾದಲ್ಲಿ ನಡೆದಿದೆ.
ಗುವೊ ಗಂಟಾಂಗ್ ಎಂಬ ವ್ಯಕ್ತಿಯೊಬ್ಬರಿಗೆ ಕೊನೆಗೂ ಮಗ ಸಿಕ್ಕಿದ್ದಾನೆ. 1997ರಲ್ಲಿ, ಗುವೊ ಅವರ 2 ವರ್ಷದ ಮಗ ಮನೆಯ ಮುಂಭಾಗದ ಗೇಟ್ ಬಳಿ ಆಟವಾಡುತ್ತಿದ್ದಾಗ ಅಪಹರಣಕ್ಕೆ ಒಳಗಾಗಿದ್ದ. ಈತನ ಹುಡುಕಾಟಕ್ಕೆ ವೃತ್ತಿಪರರನ್ನೂ ನೇಮಿಸಲಾಗಿತ್ತು. ಆದರೆ ಎಷ್ಟು ಹುಡುಕಿದರೂ ಮಗ ಸಿಕ್ಕಿರಲಿಲ್ಲ.
ಚೀನಾದಲ್ಲಿ ಮಕ್ಕಳನ್ನು ಅಪಹರಿಸಿ ಮಾರಾಟ ಮಾಡುವುದು ಮಾಮೂಲು. 2015 ರವರೆಗೆ ಒಂದು ಮಗುವಿಗೆ ಮಾತ್ರ ಅನುಮತಿ ಇದ್ದರಿಂದ ಈ ಸಮಸ್ಯೆ ಹೆಚ್ಚಾಗಿದೆ. ಪೊಲೀಸರ ಪ್ರಕಾರ, ಕಳ್ಳಸಾಗಣೆದಾರರು ಗುವೊ ಅವರ ಮಗನನ್ನು ಅಪಹರಿಸಿ ಮಧ್ಯ ಚೀನಾದಲ್ಲಿ ದಂಪತಿಗಳಿಗೆ ಮಾರಾಟ ಮಾಡಿದ್ದರು.
ತನ್ನ ಮಗನ ಅಪಹರಣದ ಸಮಯದಲ್ಲಿ 27 ವರ್ಷ ವಯಸ್ಸಿನವನಾಗಿದ್ದ ಗುವೊ, ಅವನನ್ನು ಹುಡುಕುವ ಕಾರ್ಯಾಚರಣೆಗೆ ಹೊರಟನು. ಮೋಟಾರ್‌ಸೈಕಲ್‌ನಲ್ಲಿ 24 ವರ್ಷ 310,000 ಮೈಲುಗಳಷ್ಟು ದಣಿವರಿಯದ ಪ್ರಯಾಣವನ್ನು ಪ್ರಾರಂಭಿಸಿದನು. ಕೊನೆಗೂ ಅಪಹರಣಕ್ಕೆ ಒಳಗಾದ ಮಗನನ್ನು ಹುಡುಕುವಲ್ಲಿ ಆತ ಯಶಸ್ವಿಯಾಗಿದ್ದಾನೆ.