ಪೋಷಕರ ಗಮನ ಬೇರೆಡೆಗೆ ಇದ್ದಾಗ ಫ್ರಿಡ್ಜ್ನಿಂದಲೂ, ಅಡುಗೆ ಕೋಣೆಯಿಂದಲೋ ತಿಂಡಿಗಳನ್ನು ಕದ್ದು ತಿನ್ನುವ ಅಭ್ಯಾಸ ಬಹುತೇಕ ಮಕ್ಕಳಲ್ಲಿ ಇರುತ್ತೆ.
ಪೋಷಕರ ಕಣ್ತಪ್ಪಿಸಿ ಕುರುಕಲು ತಿಂಡಿಗಳನ್ನು ತಿನ್ನೋದೇ ಮಕ್ಕಳಿಗೆ ಪರಮಾನಂದ. ಈ ರೀತಿ ಮಾಡುವಾಗ ಸಿಕ್ಕಿ ಬಿದ್ರು ಅಂದರೆ ಮುಗೀತು. ತಂದೆ ತಾಯಿಯಿಂದ ಇಡೀ ದಿನ ಬೈಗುಳ ಕೇಳೋದಂತೂ ತಪ್ಪಿದ್ದಲ್ಲ. ಇದೇ ರೀತಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಅಡುಗೆ ಕೋಣೆಯಿಂದ ಪುಟ್ಟ ಬಾಲಕಿ ಕುರುಕಲು ತಿಂಡಿಯನ್ನು ಕದ್ದು ತರುತ್ತಿದ್ದಾಳೆ. ಇದನ್ನು ತಂದೆ ವಿಡಿಯೋ ಮಾಡಿದ್ದಾರೆ. ತಂದೆ ಕೈಲಿ ತಾನು ಸಿಕ್ಕಿಬಿದ್ದೆ ಅನ್ನೋದು ತಿಳಿದ ತಕ್ಷಣ ಬಾಲಕಿ ತೋರಿದ ಮುಖಭಾವ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಈ ವಿಡಿಯೋವನ್ನು ಮೊದಲ ಟಿಕ್ಟಾಕ್ನಲ್ಲಿ ಶೇರ್ ಮಾಡಲಾಗಿದ್ದು ಇದೀಗ ಸೋಶಿಯಲ್ ಮೀಡಿಯಾದ ಬಹುತೇಕ ವೇದಿಕೆಗಳಲ್ಲಿ ವೈರಲ್ ಆಗಿದೆ.